ಕೋರೆಗಾಂವ ವಿಜಯೋತ್ಸವದಂಗವಾಗಿ ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ

ಇಂಡಿ : ಜ.2:ಶಿಕ್ಷಣವಂತರಾಗಿ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡಿದಾಗ ಮಾತ್ರ ಸರ್ಕಾರದ ಯೋಜನೆಗಳು ಸಮುದಾಯದ ಪ್ರತಿಯೊಬ್ಬರಿಗೆ ದೊರೆಯುವಂತಾಗುತ್ತದೆ.ಡಾ. ಬಾಬಾಸಾಹೇಬ ಅಂಬೇಡ್ಕರವರು ಕೇವಲ ದಲಿತ ಸಮುದಾಯದ ನಾಯಕರಷ್ಟೇ ಅಲ್ಲ. ಅವರು ಇಡಿ ಮಾನವ ಕುಲದ ಚೇತನರಾಗಿದ್ದಾರೆ. ದೇಶದ ಸಮಸ್ತ ಶೋಷಿತ ಜನಾಂಗದ ಅಭ್ಯದಯಕ್ಕಾಗಿ ಶ್ರಮಿಸಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಶಿವಾನಂದ ಮೂರಮನ ಹೇಳಿದರು.

ಅವರು ಶುಕ್ರವಾರ ನಗರದ ಅಂಬೇಡ್ಕರ ವೃತ್ತದಲ್ಲಿ ಕೋರೆಗಾಂವ ವಿಜಯೋತ್ಸವ ದಿನದ ನಿಮಿತ್ಯ ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಅಂಬೇಡ್ಕ ಅವರು ಶಿಕ್ಷಣ ಹಾಗೂ ಸಂಘಟನೆ,ಹೊರಾಟ ಸೂತ್ರಗಳನ್ನು ನೀಡಿದ್ದಾರೆ. ಆದರೆ ಇಂದು ಇದರಲ್ಲಿ ಮೊದಲನೆಯ ಸೂತ್ರವನ್ನು ಬಿಟ್ಟು ಕೊನೆಯ ಸೂತ್ರ ಹೋರಾಟಕ್ಕೆ ಇಳಿದು ,ಇತ್ತ ಶಿಕ್ಷಣವು ಪೂರ್ಣವಿಲ್ಲ. ಹೋರಾಟವು ಇಲ್ಲವೆಂಬಂತೆ ಆಗಿರುವುದು ಕಳವಳಕಾರ ಸಂಗತಿ.ಸಮುದಾಯ ಸರ್ವತೋಮುಖ ಬೆಳವಣಿಗೆಯಾಗಬೇಕಾದರೆ ಶಿಕ್ಷಣ ಅತೀಮುಖ್ಯ.ಕೇವಲ ಹೋರಾಟದಿಂದ ಮಾತ್ರ ಎಲ್ಲವೂ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಮಹಾರ ರೇಜಮೆಂಟಿನ 500 ಸೈನಿಕರು 2500 ಪೇಶ್ವೆ ಸೈನಿಕರ ವಿರುದ್ದ ಹೋರಾಟ ಮಾಡಿ ವಿಜಯ ಸಾ„ಸಿದ್ದಾರೆ. ಅಂತಹ ಶೂರ ವಂಶಸ್ಥರಾದ ಅಂಬೇಡ್ಕರ ಅನುಯಾಯಿಗಳು ಇಂದು ಶಿಕ್ಷಣದಿಂದ ವಂಚಿತರಾಗಿ,ಸರ್ಕಾರಿ ಸೌಲಭ್ಯದಿಂದ ವಂಚಿತಗೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಹೇಳಿದ್ದಾರೆ.ನಾವು ನಮ್ಮ ಇತಿಹಾಸವನ್ನು ಮೊದಲು ತಿಳಿಯಬೇಕು.ಕಡಿಮೆ ಸಂಖ್ಯೆಯಲ್ಲಿರುವ ಮಹಾರ್ ಸೈನಿಕರು ಅತೀ ದೊಡ್ಡ ಪೇಶ್ವೆ ಸೈನಿಕರನ್ನು ಸೋಲಿಸಿದ್ದರೂ ಸಹ ಯಾವ ಇತಿಹಾಸದಲ್ಲಿಯೂ ಈ ಕುರಿತು ಬರೆದಿರುವುದಿಲ್ಲ. ಇತಿಹಾಸ ಸಂಪೂರ್ಣ ತಿರುಚಲಾಗಿದೆ.ಅಂಬೇಡ್ಕರವರು ಹೇಳುವ ಹಾಗೆ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು.ಬದುಕಿನ ದಿನದಲ್ಲಿ ಸಮಾಜ,ದೇಶದ ಏಳಿಗೆಗಾಗಿ ಶ್ರಮಿಸಿ ಐತಿಹಾಸಿಕ ದಾಖಲೆ ನಿರ್ಮಿಸಬೇಕು ಎಂದು ಹೇಳಿದರು.

ಉದ್ದೀಮೆದಾರ ಲಕ್ಷ್ಮಿಕಾಂತ ಪಾಟೀಲ,ಶಿವಾನಂದ ತೆನ್ನೆಳ್ಳಿ,ರಾಜಶೇಖರ ಹಳ್ಳದಮನಿ,ಪರಶುರಾಮ ಪೆÇಳ,ಪರಶುರಾಮ ಕೆರುಟಗಿ ಇತರರು ಈ ಸಂದರ್ಭದಲ್ಲಿ ಇದ್ದರು.