ಕೋರವಾರ ಜವಾಹರ ನವೋದಯ ವಿದ್ಯಾಲಯದಲ್ಲಿ ವಲಯ ಮಟ್ಟದ ಕ್ಷೇತ್ರ ಆಟಗಳ ಕ್ರೀಡಾಕೂಟಕ್ಕೆ ಚಾಲನೆ

ಕಲಬುರಗಿ.ಜು.28:ಕೋರವಾರ ಜವಾಹರ ನವೋದಯ ವಿದ್ಯಾಲಯದಲ್ಲಿ ಇದೇ ಜುಲೈ 27 ಹಾಗೂ 28 ರಂದು ಹಮ್ಮಿಕೊಳ್ಳಲಾಗಿದ್ದ ಹೈದ್ರಾಬಾದ್ ವಲಯ ಮಟ್ಟದ ಕ್ಷೇತ್ರ ಆಟಗಳ ಕ್ರೀಡಾಕೂಟಕ್ಕೆ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲಾ ಸಮೀಕ್ಷಾ ಅಧಿಕಾರಿಗಳಾದ ಕರಬಸಪ್ಪ ಅವರು ಗುರುವಾರ ಚಾಲನೆ ನೀಡಿದರು.

   ಈ ಕ್ಷೇತ್ರ ಮಟ್ಟದ ಕ್ರೀಡಾಕೂಟದಲ್ಲಿ ಯೋಗ, ಚದುರಂಗ, ಟೇಬಲ್‍ಟೆನಿಸ್,  ಶೆಟಲ್ ಬ್ಯಾಡ್ಮಿಂಟನ್, ಕಬಡ್ಡಿ ಹಾಗೂ ಖೋಖೋ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಈ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳು ಕೇರಳ, ಆಂಧ್ರಪ್ರದೇಶ, ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಆಯೋಜಿಸಿರುವ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಅದೇ ರೀತಿ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 
  ಈ ಕ್ರೀಡಾಕೂಟದಲ್ಲಿ ಬಾಗಲಕೋಟೆ, ಬಳ್ಳಾರಿ, ಬೀದರ, ಗದಗ, ಕಲಬುರಗಿ-1, ಕಲಬುರಗಿ-2, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳು ಒಳಗೊಂಡಂತೆ 10 ಜವಾಹರ ನವೋದಯ ವಿದ್ಯಾಲಯಗಳ 6 ರಿಂದ 12ನೇ ತರಗತಿಯ ಒಟ್ಟು 301 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.