
ಕಲಬುರಗಿ : ಜು. 22: ಜಿಪಂ ಸಿಇಓ ಭಂವರ್ ಸಿಂಗ್ ಮೀನಾ ರವರು ಕಾಳಗಿ ತಾಲ್ಲೂಕಿನ ಕೋರವಾರ ಗ್ರಾಪಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಪಂನಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಭರ್ತಿ ಮಾಡಲು ಸಾರ್ವಜನಿಕರು ಬಂದಿದ್ದು ಕಂಪ್ಯೂಟರ ಆಪರೇಟರ ಗೈರು ಹಾಜರಾಗಿದ್ದರು ಸದರಿ ಸಿಬ್ಬಂದಿಗೆ ನೋಟೀಸ್ ನೀಡಲು ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿ ಗ್ರಾಪಂ ಆವರಣದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ
ನಂತರ ನರೇಗಾ ಯೋಜನೆಯ ಟ್ರೆಂಚ್ ಕಾಮಗಾರಿ ವೀಕ್ಷಣೆ ನಡೆಸಿದರು
ಶಾಲೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಶೌಚಾಲಯ ಕಾಮಗಾರಿ ವಿಕ್ಷಣೆ.ಮಾಡಿದರು
ನಂತರ ಕೊಡ್ಲಿ ಗ್ರಾಮ ಪಂಚಾಯತ ಭೇಟಿ ನೀಡಿ ಬಾಪುಜಿ ಸೇವಾ ಕೇಂದ್ರದಲ್ಲಿ ಗ್ರಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಭರ್ತಿ ಮಾಡಲು ಬಂದ ಮಹಿಳೆಯರ ಜೊತೆ ಚರ್ಚಿಸಿ ಸಮಸ್ಯೆ ಆಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು
ನಂತರ ಅರ್ಜಿ ಹಾಕಿದ ಮಹಿಳೆಗೆ ಸರ್ಟಿಫಿಕೇಟ್ ವಿತರಣೆ ಮಾಡಿದರು
ನಂತರ ಚಿಂಚೋಳಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು ಹಾಗು ಮಳೆ ಹೆಚ್ಚಾಗಿ ಬಂದು ಪ್ರವಾಹ ಬರುವ ಮುನ್ಸೂಚನೆ ಇದ್ದರೆ ಹಳ್ಳ ಹಾಗೂ ನದಿಗಳ ಸುತ್ತ ಮುತ್ತು ಇರುವ ಗ್ರಾಮದ ಜನರಿಗೆ ಮಾಹಿತಿ ನೀಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾoತರ ಮಾಡಲು ಸೂಚನೆ ನೀಡಿದರು
ಇದೆ ಸಂದರ್ಭದಲ್ಲಿ ಗ್ರಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಭರ್ತಿ ಮಾಡುವ ಸುಲೇಪೇಟ, ಗಾರಂಪಳ್ಳಿ, ಗ್ರಾಮ ಪಂಚಾಯತ ಬಾಪುಜಿ ಸೇವಾ ಕೇಂದ್ರಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿದರು. ಗಾರಂಪಳ್ಳಿ ಗ್ರಾಮದ ಶಿಶುಪಾಲನಾ ಕೇಂದ್ರ ಹಾಗು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ನಂತರ ಕನಕಪುರ ಗ್ರಾಮ ಪಂಚಾಯತ ವ್ಯಾಪ್ತಿಯ ತಾಜಲಾಪುರ ಗ್ರಾಮದ ನರ್ಸರಿ ವೀಕ್ಷಣೆ ಮಾಡಿ ಗ್ರಾಮದ ರಸ್ತೆ ಬದಿ ಅರಣ್ಯ ಇಲಾಖೆಯವರು ಮಾಡಿರುವ ಪ್ಲಾಂಟೇಷನ್ ವೀಕ್ಷಿಣೆ ಮಾಡಿದರು.
ಇತ್ತೀಚಿಗೆ ಚಿಮ್ಮನಚೋಡ ಗ್ರಾಮದಲ್ಲಿ ಕಲುಷಿತ ನೀರಿನಿಂದ ಸಮಸ್ಯೆಯಾದ ಓಣಿಗೆ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದರು.
ಈ ಸಂದರ್ಭದಲ್ಲಿ ಕಾಳಗಿ ಹಾಗೂ ಚಿಂಚೋಳಿ ತಾಲ್ಲೂಕಿನ ತಾಪಂ ಇಒ ರೇವಣಸಿದ್ದಪ್ಪ.,ಸಹಾಯಕ ನಿರ್ದೇಶಕರಾದ ಶಿವಶಂಕರಯ್ಯ ಪಂಚಾಯತ್ ರಾಜ್ ಇಲಾಖೆಯ ರಾಜೇಶ,ಗ್ರಾಮೀಣ ಕುಡಿಯುವ ನೀರು ಇಲಾಖೆಯ ರಾಹುಲ,ತಾಲೂಕ ಆರೋಗ್ಯ ಅಧಿಕಾರಿ ಡಾ. ಗಫರ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.