ಕೋರಮಂಗಲ ಅರಣ್ಯ ಪ್ರದೇಶಕ್ಕೆ ಬೆಂಕಿ

ವಿಜಯಪುರ.ಏ೧೦: ಪಟ್ಟಣದ ಹೊರವಲಯದ ದೇವನಹಳ್ಳಿ ರಸ್ತೆಗೆ ಹೊಂದಿಕೊಂಡಂತಿರುವ ಕೋರಮಂಗಲ ಅರಣ್ಯ ಪ್ರದೇಶದಲ್ಲಿ ಸೋಮವಾರದಂದು ಮಧ್ಯಾಹ್ನ ೪:೩೦ ಸಮಯದಲ್ಲಿ ಯಾರು ಕಿಡಿಗೇಡಿಗಳು ಬೆಂಕಿಕಡ್ಡಿ ಇಲ್ಲವೇ ಬೀ
ಡಿಸೇದಿ ಹಾಕಿರುವ ಕಾರಣಗಳಿಂದ ಅರಣ್ಯ ಪ್ರದೇಶದಲ್ಲಿ ಬಹಳಷ್ಟು ಮರಗಳು ಬೆಂಕಿಗೆ ಆಹುತಿಯಾಗಿದ್ದು ಸಂಪೂರ್ಣ ಗಿಡಗಳು ಎಲೆಗಳು ಬಿಸಿಲಿಗೆ ಒಣಗಿದ್ದ ಕಾರಣ ಒಮ್ಮೆಲೇ ಬೆಂಕಿ ವ್ಯಾಪಕವಾಗುತ್ತಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನ ಪಡುತ್ತಿದ್ದರು ಸಮೀಪದ ದೇವನಹಳ್ಳಿ ಅಗ್ನಿಶಾಮಕ ಠಾಣೆಗೂ ನಮ್ಮ ವರದಿಗಾರರಾದ ಕಿಶೋರ್ ಕುಮಾರ್ ರವರು ಸುದ್ದಿ ಮುಟ್ಟಿಸಿ ಅಗ್ನಿಶಾಮಕ ವಾಹನ ಬರಲು ಸಹಕರಿಸಿದರು.
ಈ ಕಾರಣದಿಂದ ಅರಣ್ಯ ಪ್ರದೇಶದಲ್ಲಿನ ಹತ್ತಾರು ಎಕರೆ ಅರಣ್ಯ ಪ್ರದೇಶ, ಹಲವಾರು ಪ್ರಾಣಿಗಳು, ಮೂಕ ಜೀವಿಗಳು ಬೆಂಕಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಬೇಸಿಗೆಕಾಲವಾದ ಕಾರಣ ಸಾರ್ವಜನಿಕರು ವಿಜಯಪುರ ಸುತ್ತಮುತ್ತಲೂ ಇರುವ ಅರಣ್ಯ ಪ್ರದೇಶದಲ್ಲಿ ಈ ರೀತಿ ಹಿಡಿಗೇಡಿಗಳು ಬೆಂಕಿ ಹಾಕೋ ಕೆಲಸ ಮಾಡಿದಲ್ಲಿ ಕೂಡಲೇ ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಗೆ ಸುದ್ದಿ ತಲುಪಿಸುವುದರೊಂದಿಗೆ ಇಂತಹ ಅವಘಡಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ.