ಕೋಮುಸೌರ್ಹಾದತೆ ಸಂಕಲ್ಪ – ಡಾ.ಚನ್ನನಗೌಡ

ಸಿಂಧನೂರು.ನ.೪-ದ್ವೇಷ, ಅಸೂಯೆ, ಮತ್ಸರ ಮರೆತು ಎಲ್ಲರು ಪ್ರೀತಿ ಕೋಮುಸೌರ್ಹಾದತೆಯಿಂದ ಜನತೆ ಬದುಕು ಸಾಗಿಸುವ ನಿಟ್ಟಿನಲ್ಲಿ ಸದ್ಭಾವನಾ ವೇದಿಕೆ ಆರಂಬಿಸಲಾಗಿದೆ ಎಂದು ಸದ್ಭಾವನಾ ವೇದಿಕೆ ಅಧ್ಯಕ್ಷ ಡಾ.ಚನ್ನನಗೌಡ ಪೊಲೀಸ್ ಪಾಟೀಲ್ ತಿಳಿಸಿದರು.
ನಗರದ ತಾಪಂ ಆವರಣದಲ್ಲಿರುವ ಸರ್ಕಾರ ನೌಕರರ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕ ಶಾಂತಿ, ಸುವ್ಯವಸ್ಥೆ, ಕೋಮುಸೌರ್ಹಾದತೆಗೆ ಹೆಸರು ವಾಸಿಯಾಗಿದ್ದು ಎಲ್ಲರು ಸಹೋದರರಂತೆ ಜೀವನಸಾಗಿಸುತ್ತಿದ್ದಾರೆ ಎಂದರು.
ಸ್ತ್ರೀ ಶಕ್ತಿ ಭವನದಲ್ಲಿ ಮಹಾಲಿಂಗಪುರದ ಇಬ್ರಾಹಿಂ ಸುತ್ತಾರ್ ಸದ್ಭಾವನಾ ವೇದಿಕೆಯನ್ನು ಉದ್ಘಾಟಿಸಲಿದ್ದು, ಮೂರು ಮೈಲ್ ಕ್ಯಾಂಪಿನ ಸೋಮನಾಥ ಶಿವಚಾರ್ಯರರು ಸಮಾರಂಭದ ಸಾನಿಧ್ಯವಹಿಸುವರು.
ಮಂಗಳೂರಿನ ಮಹಮ್ಮದ ಕುಂಇ, ಹೋಲಿಫ್ಯಾಮಿಲಿ ಚರ್ಚ ಫಾಧರ, ನಂಜುಡಯ್ಯ ಗುರುವಿನ, ನಾಮದೇವ ಗೌಡ ಸೇರಿದಂತೆ ಇತರರು ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳಲ್ಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸದ್ಭಾವನಾ ವೇದಿಕೆ ಅಧ್ಯಕ್ಷ ಡಾ.ಚನ್ನನಗೌಡ ಪೊಲೀಸ್ ಪಾಟೀಲ್ ಕೋರಿದರು.
ಸದ್ಭಾವನಾ ವೇದಿಕೆ ಮುಖಂಡರಾದ ಹೆಚ್‌ಎನ್ ಬಡಿಗೇರ್, ಶ್ಯಾಮಣ್ಣ ನಾಯಕ, ವೆಂಕಣ್ಣ ಜೋಶಿ, ಬಾಬರ್ ಪಾಷ ವಕೀಲ, ಕೆ. ಮರಿಯಪ್ಪ, ವೀರಭದ್ರಗೌಡ ಅಮರಾಪುರ, ಬೀರಪ್ಪ ಶಂಬೋಜಿ, ಮಹ್ಮದ ಹುಸೇನ್, ಖಾದರ ಸುಬಾನಿ, ಎಸ್ ಶರಣೇಗೌಡ, ಶರಣಪ್ಪ ಟೆಂಗಿನಕಾಯಿ, ಸತ್ಯನಾರಾಯಣ ಶೆಟ್ಟಿ, ಹುಸೇನ್ ಬಾಷಾ, ಡಿಹೆಎಚ್ ಕಂಬಳಿ, ಶ್ಯಾಮಕುಮಾರ, ಚಂದ್ರಶೇಖರ ಹೀರೆಮಠ, ಪಂಪಯ್ಯಸ್ವಾಮಿ ಸೇರಿದಂತೆ ಅನೇಕರು ಇದ್ದರು.