ಕೋಮುವಾದಿಗಳ ದೂರ ಇರಿಸಲು ಬಿಜೆಪಿಗೆ ದಸಂಸ ಬೆಂಬಲ

ಸಂಜೆವಾಣಿ ನ್ಯೂಸ್
ಮೈಸೂರು: ಏ.10:- ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಕಾಂಗ್ರೆಸ್ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ದಲಿತ ಸಂಘರ್ಷ ಸಮಿತಿ- ಕರ್ನಾಟಕವು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದೆ ಎಂದು ರಾಜ್ಯಾಧ್ಯಕ್ಷ ಮಂಜುನಾಥ್ ಅಣ್ಣಯ್ಯ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಬದಲಾಯಿತಿ ಹಿಂದೂ ಧರ್ಮದ ಹೆಸರಿನಲ್ಲಿ, ಧರ್ಮ ಸಂಸತ್ ಸ್ಥಾಪಿಸಿ ಅದರ ಮೇಲೆ ಹಿಡಿತ ಸಾಧಿಸುವುದು ಬಿಜೆಪಿ ಹಾಗೂ ಆರ್‍ಎಸ್‍ಎಸ್ ಗುರಿಯಾಗಿದೆ. ಹೀಗಾಗಿ ಸುಮಾರು 400 ಲೋಕಸಭಾ ಸ್ಥಾನ ಗೆಲ್ಲಬೇಕೆಂದು ಅಪಾರ ಅಕ್ರಮ ಹಣವನ್ನು ಸಂಗ್ರಹಿಸಿರಿಕೊಂಡಿದ್ದಾರೆ. ಮಾಧ್ಯಮಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುವುದರೊಡನೆ ಇಡಿ, ಐಟಿ, ಸಿಬಿಐ ದಾಳಿಗಳ ಮೂಲಕ ವಿರೋಧ ಪಕ್ಷಗಳ ಮೇಲೆ ದಾಳಿ ನಡೆಸುತ್ತಿದ್ದಾರೆಂದು ಆರೋಪಿಸಿದರು.
ಈ ನಡುವೆ ದೇಶದಲ್ಲಿ ಇದಕ್ಕೆ ಪ್ರತಿರೋಧವೂ ಬಲವಾಗಿದೆ. ದೇಶದ ದುಡಿಯುವ ಜನರು, ದಮನಿತ ಸಮುದಾಯಗಳು, ಅಲ್ಪಸಂಖ್ಯಾತರು, ಪ್ರಜ್ಞಾವಂತರು ಒಂದಾಗುವ ಮೂಲಕ ಷಡ್ಯಂತ್ರ ವಿಫಲಗೊಳಿಸಲು ಶ್ರಮಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ವಿರುದ್ಧದ ನಿಸ್ತೇಜ ಮಾತುಗಳನ್ನು ತಿರಸ್ಕರಿಸುವ ಮೂಲಕ ಅದಕ್ಕೆ ಬೆಂಬಲ ನೀಡಬೇಕು. ಈ ಮೂಲಕ ಸಂವಿಧಾನ ರಕ್ಷಣೆಗೆ ಮುಂದಾಗಬೇಕು. ಇನ್ನು, ರಾಜ್ಯದಲ್ಲಿ ದಲಿತ ಸಿಎಂ ವಿಷಯ ಈ ಸಂದರ್ಭದಲ್ಲಿ ಪ್ರಸ್ತುತವಲ್ಲ ಎಂದರು.
ಇನ್ನಿತರ ಪದಾಧಿಕಾರಿಗಳಾದ ವಸಂತ್, ಪ್ರಶಾಂತ್, ರವಿ, ವಿನೋದ್ ಚಾಕೋ, ಉಮೇಶ್ ಇದ್ದರು.