ಕೋಮುವಾದಿಗಳನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗಳಿಗೆ  ದಲಿತ ಸಂಘಟನೆಗಳ ಬೆಂಬಲ: ಸಾಗರ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಮೇ 6: ರಾಜ್ಯದಲ್ಲಿ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು.
ನಮ್ಮ ಹೋರಾಟ ಸಮಿತಿಯು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯದ ಜನತೆಗೆ ಮನವಿ ಮಾಡುತ್ತದೆಂದು.  ದಲಿತ ಸಂಘಟನೆಗಳ ಐಕ್ಯತಾ ಹೋರಾಟ ಚಾಲನ ಸಮಿತಿಯ ಮುಖಂಡರು,
ಕರ್ನಾಟ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ  ಡಾ.ಡಿ.ಜಿ. ಸಾಗರ್ ಅವರು ಹೇಳಿದರು.

ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೋದಿ ಸರ್ಕಾರ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರತಿ ವರ್ಷ ಎರೆಡು ಕೋಟಿ ಉದ್ಯೋಗ ಸೃಷ್ಟಿ ಸುಳ್ಳಾಗಿದೆ. ವಿದೇಶದಲ್ಲಿನ ಕಪ್ಪು ಹಣ ತರಲಿಲ್ಲ. ಮಹುಳೆಯರ ಮೇಲಿನ ದೌರ್ಜನ್ಯ ನಿಲ್ಲುತ್ತಿಲ್ಲ. ಇದನ್ನು ನಿತಂತ್ರಿಸಲು ಸಾಧ್ಯವಾಗಿಲ್ಲ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಮಾರಾಟ ನಡೆದಿದೆ. ಸಂವಿಧಾನಾತ್ಮಕವಾಗಿ ಸರ್ಕಾರ ನಡೆಯುತ್ತಿಲ್ಲ. ಬಹುತ್ವದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ.

ಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಹೆಚ್ಚಳ‌ ಮಾಡಿದೆ  ಎಂದು ಬಿಜೆಪಿ ಹೇಳುತ್ತಿದೆ ಆದರೆ. ಅದು ಅನುಷ್ಟಾನಕ್ಕೆ ಬಂದಿಲ್ಲ. ಮೀಸಲಾತಿ ಶೇ. 50 ಮೀರಿದರೆ ಜಾರಿಗೆ ತರಲು ಆಗದು.  ಸದಾಶಿವ ಆಯೋಗದ ವರದಿ ಒಪ್ಒದೆ  ಒಳಮೀಸಲಾತಿ ಜಾರಿ ಬಗ್ಗೆ ಆದೇಶ ಹೊರಡಿಸಿದೆ. ಕಲಂ 341 ತಿದ್ದುಪಡಿ  ಆಗದೆ ಇದು ಜಾರಿಗೆ ಬರಲ್ಲ. 
ಈ ಸರ್ಕಾರ ಮತಗಳಿಗಾಗಿ ಮೀಸಲಾತಿ ಹೆಚ್ಚಳ, ಒಳ ಮೀಸಲಾತಿ ಆದೇಶ ಮಾಡಿದೆಯಷ್ಟೇ ಎಂದರು.

ಎಸ್ಸಿ ಎಸ್ಟಿಗಳನ್ನು ಆಕರ್ಷಣೆ ಮಾಡಲು ಮಾಡಿದ ತಂತ್ರಗಾರಿಕೆ ಅವರದ್ದಾಗಿದೆ. ದಲಿತರಿಗೆ ಗುತ್ತಿಗೆ ನೀಡಿಕೆಯಲ್ಲ ಅನ್ಯಾಯ ಮಾಡಿದೆ.  ಎಸ್ಸಿಪಿ ಎಸ್ಟಿಪಿ ಗೆ ನೀಡುವ ಅನುದಾನ ಕಡಿತ ಮಾಡಿದೆ. ಅಷ್ಟೇ ಅಲ್ಲದೆ ಈ ಅನುದಾನ ಇತರೇ ಯೋಜನೆಗಳಿಗೆ ಬಳಸಿಕೊಂಡು ಅನ್ಯಾಯ ಮಾಡಿದೆ. ಮತಾಂತರ ಕಾಯ್ದೆ ತಿದ್ದುಪಡಿ, ಶೇ 40 ರಷ್ಟು ಕಮೀಷನ್ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ನ್ನು ಬೆಂಬಲಿಸಲಿದೆಂದರು.

ಸುದ್ದಿಗೋಷ್ಟಿಯಲ್ಲಿ ನಗರದ ಮೇಯರ್ ತ್ರಿವೇಣಿ ಸೂರಿ,  ದಲಿತ ಸಂಘಟನೆಗಳ  ಮುಖಂಡರುಗಳಾದ ಎ.ಮಾನಯ್ಯ, ದೇವದಾಸ್, ಹೆಚ್.ಸಿದ್ದೇಶ್, ತಾಯಪ್ಪ, ನರಸಪ್ಪ, ತಳಾವಾರ ದುರ್ಗಪ್ಪ, ಗೋರ್ವದನ್, ಹೆಚ್.ಶಂಕರ್,  ಚಿಕ್ಕ ಗಾದಿಲಿಂಗಪ್ಪ,  ಅಂಜನೇಯ, ದೇವದಾಸ್, ಗಂಗಾಧರ, ಹುಸೇನಪ್ಪ, ಸೋಮಶೇಖರ್,  ಟಿ.ಎಂ.ಎರ್ರಿಸ್ವಾಮಿ, ಮಲ್ಲಪ್ಪ ಮೊದಲಾದವರು ಇದ್ದರು.