ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡಗೆ ಅಭಿನಂದನೆ ಸಮಾರಂಭ

ಮಾಲೂರು,ಜೂ.೭- ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹಾಲು ಉತ್ಪಾದಕರು ನೀಡುವ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟದಿಂದ ಕೋಮುಲ್ ಒಕ್ಕೂಟವು ೧೭೦ ಕೋಟಿ ಲಾಭದಾಯಕದಲ್ಲಿದೆ ಎಂದು ಕೋಮುಲ್ ಅಧ್ಯಕ್ಷ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ವೈಟ್ ಗಾರ್ಡನ್ ಬಳಿ ಇರುವ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಮಾಲೂರು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಕಾರ್ಯಕಾರಿ ಮಂಡಳಿ ಹಾಲು ಉತ್ಪಾದಕರು ಕೋಲಾರ ಹಾಲು ಒಕ್ಕೂಟದಲ್ಲಿ ಐದು ವರ್ಷ ಅವಧಿ ಅಧ್ಯಕ್ಷರಾಗಿ ಯಶಸ್ವಿ ಪೂರ್ಣಗೊಳಿಸಿದ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನನಗೆ ಅವಕಾಶಗಳನ್ನು ಮಾಡಿಕೊಟ್ಟ ತಾಲೂಕಿನ ಜನತೆ ಅದರ ಕೀರ್ತಿ ಸಲ್ಲುತ್ತದೆ. ಅವಕಾಶಗಳು ಹೆಚ್ಚಾದಂತೆ ಜವಾಬ್ದಾರಿಯು ಸಹ ಹೆಚ್ಚಾಗಿದೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ವಿಶೇಷವಾಗಿ ಹಾಲು ಉತ್ಪಾದಕ ಸಂಘಗಳು ಮೊದಲ ಅವಧಿಯಲ್ಲಿ ಶಾಸಕರಾಗಲು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಒಕ್ಕೂಟದ ಅಧ್ಯಕ್ಷನಾಗಲು ಸಹ ಕೋಲಾರ ಚಿಕ್ಕಬಳ್ಳಾಪುರ ಕಾಂಗ್ರೆಸ್ ಪಕ್ಷದ ನಾಯಕರು ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ೧೦ ತಿಂಗಳು ಕಾಲಾವಕಾಶ ಮಾಡಿಕೊಟ್ಟಿದ್ದರು. ನನ್ನ ಕಾರ್ಯವೈಖರಿಯನ್ನು ಗಮನಿಸಿದ ನಿರ್ದೇಶಕರು ಐದು ವರ್ಷ ಅವಧಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ನನ್ನ ಅಧಿಕಾರ ಅವಧಿಯಲ್ಲಿ ಕಡಿಮೆ ಅವಧಿಯಲ್ಲಿ ವೇಗವಾಗಿ ೨೫೦ ಕೋಟಿ ರೂಗಳ ವೆಚ್ಚದಲ್ಲಿ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೈರಿ ನಿರ್ಮಿಸಲಾಗಿದೆ. ಕೋಲಾರ ಒಕ್ಕೂಟದಲ್ಲಿ ಎಂವಿಕೆ ಗೋಲ್ಡನ್ ಡೈರಿ ೨೮೫ ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕಾರಣಾಂತರಗಳಿಂದ ವಿಳಂಬವಾಗಿದೆ. ಒಕ್ಕೂಟ ಸಾಲಕ್ಕೆ ಸಿಗದಂತೆ ಅಭಿವೃದ್ಧಿಗೆ ಹಣ ಮೀಸಲಿಟ್ಟು ಎಂವಿಕೆ ಗೋಲ್ಡನ್ ಡೈರಿ ಕಾಮಗಾರಿ ಪ್ರಾರಂಭಿಸುತ್ತೇವೆ. ನ್ಯಾಯಾಲಯದಲ್ಲಿ ಪ್ರಕರಣ ನಮ್ಮ ಪರವಾಗಿ ಆಗುವ ವಿಶ್ವಾಸವಿದೆ ಎಂದರು.
ಕೋಮುಲ್ ಒಕ್ಕೂಟದ ವ್ಯವಸ್ಥಾಪಕ ಗೋಪಾಲ್ ಮೂರ್ತಿ, ಮಾಲೂರು ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ಚೇತನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನರಾಯಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಸಹಕಾರಿ ಯೂನಿಯನ್ ನಿರ್ದೇಶಕ ಗೋವರ್ಧನ್ ರೆಡ್ಡಿ, ಒಕ್ಕೂಟದ ವ್ಯವಸ್ಥಾಪಕರಾದ ಡಾ.ಶ್ರೀನಿವಾಸ್‌ಗೌಡ, ನಾಗೇಶ, ಮುರಳಿ, ವಿಶ್ವನಾಥ್, ಗುರುಪ್ರಸಾದ್, ರಾಜೀವ್, ಪುರಸಭಾ ಸದಸ್ಯ ಎ.ರಾಜಪ್ಪ, ಯುವ ಮುಖಂಡ ಸುನಿಲ್ ನಂಜೆಗೌಡ, ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ, ಹಾಲು ಉತ್ಪಾದಕರು, ಸಭೆಯಲ್ಲಿ ಹಾಜರಿದ್ದರು.