ಕೋಮಲ್ 25 ನೇ ಚಿತ್ರ ಹಾರರ್ `ಕುಟೀರ’ ಆರಂಭ

ಹಾಸ್ಯ ಕಲಾವಿದನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಕೋಮಲ್ ಕುಮಾರ್  ಆನಂತರ ನಾಯಕನಾಗಿಯೂ ಮಿಂಚಿದವರು. ಇದೀಗ ಅವರು ನಾಯಕನಾಗಿರುವ 25 ನೇ ಚಿತ್ರ ” ಕುಟೀರ” ಚಿತ್ರ ಸೆಟ್ಟೇರಿದೆ.

ಕುಟೀರ , ಹಾರಾರ್ ಕಾಮಿಡಿ ಫ್ಯಾಂಟಸಿ ಜಾನರ್ ನ ಚಿತ್ರದ ಎಳೆ ಹೊಂದಿದ್ದು ಮತ್ತೊಮ್ಮೆ ಕೋಮಲ್ ತಮ್ಮ ಇಷ್ಡದ ಜಾನರ್ ನ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರದ ಮಹೂರ್ತದ ಬಳಿಕ‌ ಮಾಹಿತಿ ಹಂಚಿಕೊಂಡ ಕೋಮಲ್,

ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನಾಯಕನಾಗಿ ನಟಿಸುತ್ತಿರುವ 25 ನೇ ಚಿತ್ರ. ಹೀಗಾಗಿ ವಿಶೇಷತೆ ಇದೆ.

ಕೆಲವು ಹಾರಾರ್ ಕಾಮಿಡಿ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದ ಕಥೆ ಸ್ವಲ್ಪ ವಿಭಿನ್ನ. ಚಿತ್ರದ ಹೆಸರೆ ಹೇಳುವಂತೆ ” ಕುಟೀರ” ಎಂದರೆ ಮನೆ. ಚಿತ್ರದಲ್ಲೂ  ದೊಡ್ಡ ಮನೆ ಇರುತ್ತದೆ. ಅಲ್ಲಿಗೆ ಬಂದು ಸಿಕ್ಕಿ ಹಾಕಿಕೊಳ್ಳುವ ನನಗೆ ದೆವ್ವಗಳು ಏನು ಮಾಡುತ್ತದೆ ಎನ್ನುವುದನ್ನು ಕಾಮಿಡಿಯಾಗಿ ತೋರಿಸಲಾಗಿದೆ ಎಂದರುಮ

 ಚಿತ್ರದಲ್ಲಿ ಸಿಜಿ ವರ್ಕ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಮಧು ಮರಿಸ್ವಾಮಿ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಆಂಟೋನಿ ನಿರ್ದೇಶಿಸುತ್ತಿದ್ದಾರೆ. ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ನುರಿತ ತಂತ್ರಜ್ಞರು ಹಾಗೂ ಅನುಭವಿ ಕಲಾವಿದರ ತಾರಾಬಳಗ “ಕುಟೀರ” ಚಿತ್ರದಲ್ಲಿದೆ. ನನ್ನ ಮೂವತ್ತು ವರ್ಷಗಳ ಸಿನಿಜರ್ನಿಯಲ್ಲಿ  ಸಹಕಾರ ಹೀಗೆ ಇರಲಿ ಎಂದರು

ನಿರ್ದೇಶಕ ಅನೂಪ್ ಆಂಟೋನಿ  ಮಾತನಾಡಿ ಕಥೆ ಬರೆದಾಗಲೇ ಕೋಮಲ್ ನಾಯಕ ಅಂದುಕೊಂಡಿದ್ದೆ. ನಿರ್ಮಾಪಕರ ಬಳಿಯೂ ಹೇಳಿದ್ದೆ‌. ಕೋಮಲ್ ಕಥೆ ಕೇಳಿ ಇಷ್ಟಪಟ್ಟರು. ಮಾರ್ಚ್ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ ಎಂದರು.

ನಿರ್ಮಾಪಕ ಮರಿಸ್ವಾಮಿ,ನಾಯಕಿ ಪ್ರಿಯಾಂಕಾ ತಿಮ್ಮೇಶ್ ಮಾಹಿತಿ ಹಂಚಿಕೊಂಡರು. ಯಶ್ ಶೆಟ್ಟಿ, ಕಾಕ್ರೋಜ್ ಸುಧೀ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಿ.ಜಿ.ಭರತ್ ಸಂಗೀತ ವಿದೆ.