
ಕಲಬುರಗಿ:ಮೇ.20:ಪ್ರತಿ ವರ್ಷದಂತೆ ಈ ವರ್ಷವು ಕೋಬಾಳ ಗ್ರಾಮದ ಗ್ರಾಮದೇವತೆ ದೇವಮ್ಮಾಯಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ದಿ 18-05-2023 ರಂದು ನಾಡಿನ ಹೆಸರಾಂತ ಕಲಾವಿದರಿಂದ ಪ್ರವಚನ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಖ್ಯಾತ ಪ್ರವಚನಕಾರರಾದ ಸಂಗಮೇಶ ಶಾಸ್ತ್ರಿಗಳು ಮಾಶಾಳ,ಆಕಾಶವಾಣಿ ಕಲಾವಿದರಾದ ದತ್ತರಾಜ ಕಲಶೆಟ್ಟಿ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಬಾಬುರಾವ್ ಕೋಬಾಳ ಬಸಯ್ಯ ಗುತ್ತೇದಾರ್ ತೆಲ್ಲೂರು ಜಗದೀಶ್ ದೇಸಾಯಿ ಕಲ್ಲೂರ್ ಇವರಿಂದ ಪ್ರವಚನ ಭಕ್ತಿ ಸಂಗೀತ ಕಾರ್ಯಕ್ರಮ ಕೇಳುಗರ ಮನಸೆಳೆಯಿತು.
ದಿನಾಂಕ 19.05.2023 ರಂದು ಬೆಳಿಗ್ಗೆ ದೇವಮಾಯಿ ತಾಯಿಯ ವಿಶೇಷ ಪೂಜೆ ನಂತರ ಪಲ್ಲಕ್ಕಿ ಉತ್ಸವ ಗ್ರಾಮದ ಬಡಾವಣೆಯಲ್ಲಿ ಮನೆ ಮನೆಗೆ ಬಾಜಿ ಭಜಂತ್ರಿ ಸಕಲ ವಾದ್ಯ ಮೇಳದೊಂದಿಗೆ ತೆರಳಿದಾಗ ಭಕ್ತರು ತಾಯಿಯ ದರ್ಶನ ಪಡೆದು ಪುನೀತರಾದರು ನಂತರ ಭಕ್ತರಿಗಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು ಸುತ್ತಮುತ್ತಲಿನ ಗ್ರಾಮಗಳ ಗಣ್ಯಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಗ್ರಾಮದ ಮುಖಂಡರಾದ ಶರಣ್ ಗೌಡ ಮಾಲಿ ಬಿರಾದಾರ್, ಸನ್ಮುಖಪ್ಪ ಗೌಡ ಮಾಲಿ ಬಿರಾದಾರ್, ಹನುಮಂತರಾಯಗೌಡ ಪಾಟೀಲ, ಶಂಕರ್ ಗೌಡ ಮಾಲಿ ಬಿರಾದಾರ್, ಶಿವಶರಣಪ್ಪ ಕೋಬಾಳ್ , ಬಸವರಾಜ್ ಕೋಬಾಳ ವಕೀಲರು, ಜಗಣ್ಣಗೌಡ ಬಿರಾದರ್ ,ಶಿವಪ್ಪ ಗೌಡ ಬಿರಾದಾರ್ ,ಬಸ್ವಂತರಾಯಗೌಡ ಬಣಮಗಿ, ವಿನೋದ್ ಕುಮಾರ್ ಮಾಲಿಪಾಟೀಲ್, ಸರ್ವೇಶ್ ಬಿರಾದಾರ್ ,ಸಾಹೇಬ್ ಗೌಡ ಬಿರಾದಾರ್ ಮಹಿಮದ್ ಗೌಡ ಪೆÇಲೀಸ್ ಪಾಟೀಲ್, ಖಾದಿರ್ ಪಾಟೀಲ್ ಪೆÇಲೀಸ್ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ್ ನಿಂಗಬೋ, ಅಶೋಕ್ ಕೋಬಾಳ್ ಹಿಪ್ಪರಗಿ, ವಿಜಯ್ ಕುಮಾರ್ ನಿಂಗಬೋ, ಸೈಬಣ್ಣ ಮ್ಯಾಕೆರಿ ,ರಮೇಶ್ ನರಸಬೋ, ಶೇಕ್ ಫರೀದ್, ಅನಿಲ್ ಕುಮಾರ್ ಎಸ್,ಹರಳಯ್ಯ, ಗುಂಡು ನಾಯ್ಕೋಡಿ ,ಇನ್ನಿತರರು ಕಾರ್ಯಕ್ರ ಮದಲ್ಲಿ ಭಾಗವಹಿಸಿ ದೇವಮ್ಮಾಯಿ ತಾಯಿಯ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಿದರು ಎಂದು ದೇವಮ್ಮಾಯಿ ಜಾತ್ರಾ ಮಹೋತ್ಸವದ ಪ್ರಕಟಣೆ ತಿಳಿಸಿದೆ