ಕೋನಮೆಳಕುಂದಾ ರೈತ ವೈಜಿನಾಥ ಬಿರಾದಾರ್ ಆತ್ಮಹತ್ಯೆ

ಭಾಲ್ಕಿ:ಮಾ.24: ತಾಲ್ಲೂಕಿನ ಕೋನಮೇಳ ಕುಂದಾ ಗ್ರಾಮದ ರೈತ ವೈಜಿನಾಥ ಮನೋಹರ ಬಿರಾದಾರ (35) ಸೋಮವಾರ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಕೃಷಿ ಚಟುವಟಿಕೆ, ಟ್ರ್ಯಾಕ್ಟರ್‌ ಖರೀದಿಗಾಗಿ ಹಲಬರ್ಗಾ ಗ್ರಾಮದ ಪಿಕೆಜಿಬಿ ಬ್ಯಾಂಕ್‌ನಲ್ಲಿ 9 ಲಕ್ಷ, ಸ್ವಗ್ರಾಮದ ಪಿಕೆಪಿಎಸ್‌ನಲ್ಲಿ 1.40 ಲಕ್ಷ, ಖಾಸಗಿಯಾಗಿ 4 ಲಕ್ಷ ಸೇರಿದಂತೆ ಒಟ್ಟು 14.40 ಲಕ್ಷ ಸಾಲವಿತ್ತು. ಸಾಲ ತೀರಿಸುವ ಚಿಂತೆಯಲ್ಲಿ ಹೊಲದಲ್ಲಿ ವಿಷ ಸೇವಿಸಿ ಮನೆಗೆ ಬಂದು ವಿಷ ಸೇವಿಸಿರುವುದಾಗಿ ತಿಳಿಸಿದನು. ತಕ್ಷಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದನು’ ಎಂದು ಮೃತ ರೈತನ ತಂದೆ ಮನೋಹರ ಬಿರಾದಾರ ತಿಳಿಸಿದ್ದಾರೆ. ಧನ್ನೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.