ಕೋದಂಡ ರಾಮನ ದರ್ಶನ ಪಡೆದ ಮೋದಿ

ಕನ್ಯಾಕುಮಾರಿ,ಜ.೨೧- ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧನುಷ್ಕೋಡಿಯ ಶ್ರೀಕೋದಂಡರಾಮ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಲಿದರು.
ರಾಮಸೇತು ನಿರ್ಮಿಸಿದ ಸ್ಥಳವೆಂದು ಹೇಳಲಾದ ಅರಿಚಲಮುನೈಗೆ ಭೇಟಿ ನೀಡಿದ ಪ್ರಧಾನಿ ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮತ್ತು ದರ್ಶನ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅರಿಚಲ್ ಮುನೈ ಪಾಯಿಂಟ್‌ಗೆ ಭೇಟಿ ನೀಡಿದ್ದರು. ಈ ಸ್ಥಳವನ್ನು ರಾಮಸೇತು ನಿರ್ಮಿಸಿದ ಸ್ಥಳ ಎಂದು ಹೇಳಲಾಗುತ್ತದೆ. ಬಳಿಕ ಶ್ರೀ ಕೋಡಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಕೋದಂಡರಾಮ ಎಂದರೆ ಬಿಲ್ಲು ಹಿಡಿದ ರಾಮ. ಇದು ಧನುಷ್ಕೋಡಿಯಲ್ಲಿದೆ. ವಿಭೀಷಣನು ಮೊದಲು ಶ್ರೀರಾಮನನ್ನು ಭೇಟಿಯಾಗಿ ಆಶ್ರಯವನ್ನು ಕೇಳಿದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಶ್ರೀರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಇದು ಎಂದು ವ್ಯಾಪಕವಾಗಿ ನಂಬಲಾಗಿದೆ.
ಕೋದಂಡರಾಮ ಎಂದರೆ ಬಿಲ್ಲು ಹಿಡಿದ ರಾಮನ ಮಂದಿರವಾಗಿದೆ. ೩ ದಿನಗಳ ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನಿ ಶ್ರೀರಾಮನ ದರ್ಶನ ಪಡೆಯುವ ಮೂಲಕ ಪ್ರವಾಸ ಪೂರ್ಣಗೊಳಿಸಿದ್ದಾರೆ.
ಚೆನ್ನೈನಲ್ಲಿ ಖೇಲೋ ಇಂಡಿಯಾ ಗೇಮ್ಸ್ ೨೦೨೩ ಅನ್ನು ಉದ್ಘಾಟಿಸಿದರು. ನಿನ್ನೆ ಶ್ರೀರಂಗಂ ಮತ್ತು ರಾಮೇಶ್ವರಂನಲ್ಲಿರುವ ಶ್ರೀ ರಂಗನಾಥಸ್ವಾಮಿ ಮತ್ತು ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.