ಕೋಡ್ಲಾದಲ್ಲಿ 50 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಶಾಸಕ ತೇಲ್ಕೂರ್

ಸೇಡಂ,ಎ,30: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಈಕರಸಾ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ತಾಲೂಕಿನ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್ ಭೇಟಿ ನೀಡಿ ಆಸ್ಪತ್ರೆ ಕೋವಿಡ ವಾ??9ಗೆ ತೆರಳಿ ಸೊಂಕಿತರ ಆರೋಗ್ಯ ವಿಚಾರಿಸಿ,ವೈದ್ಯರಿಗೆ ಶುಶ್ರೂಷಕರಿಗೆ ಉತ್ತಮ ಸೇವೆ ಸಲ್ಲಿಸಲು ಸೂಚಿಸಿದರು. ಕೋಡ್ಲಾ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸ್ಥಾಪಿಸಲಾದ 50 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದರು.ಈ ವೇಳೆಯಲ್ಲಿ ಸಹಾಯಕ ಉಪ ವಿಭಾಗ ಆಯುಕ್ತರಾದ ರಮೇಶ್ ಎಸ್ ಕೋಲಾರ್ ತಹಸೀಲ್ದಾರರಾದ ಬಸವರಾಜ್ ಬೆಣ್ಣಿ ಶಿರೂರು ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ಹಳ್ಳಿಗೋದಿ, ತಾಲೂಕಾ ಆರೋಗ್ಯಧಿಕಾರಿ ಡಾ. ಗೀತಾ ಪಾಟೀಲ್,ಡಾ. ರಾಕೇಶ್ ಕಾಂಬ್ಳೆ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು.