ಕೋಡುಬಳೆ ಮಾಡುವ ವಿಧಾನ

ಬೇಕಾದ ಸಾಮಗ್ರಿಗಳು
ಅಕ್ಕಿ ಹಿಟ್ಟು : ಒಂದು ಕಪ್
ಮೈದಾ ಹಿಟ್ಟು: ಕಾಲು ಕಪ್
ಚಿರೋಟಿ ರವೆ : ಕಾಲು ಕಪ್
ತೆಂಗಿನ ತುರಿ : ಅರ್ಧ ಕಪ್
ಜೀರಿಗೆ: ಒಂದು ಚಮಚ
ಅಚ್ಚಖಾರದ ಪುಡಿ :ಎರಡು ಚಮಚ
ಕರಿಯಲು: ರಿಫೈನ್ಡ್ ಎಣ್ಣೆ
ಕಾದಿರುವ ಎಣ್ಣೆ : ಒಂದು ಚಿಕ್ಕ ಸೌಟ್
ಚಿಟಿಕೆ ಇಂಗು, ಉಪ್ಪು
ಮಾಡುವ ವಿಧಾನ:-
ಮೊದಲಿಗೆ ಮೈದಾವನ್ನು ಬೆಚ್ಚಗೆ ಮಾಡಿಕೊಳ್ಳಿ.. ನಂತರ ಅದಕ್ಕೆ ಅಕ್ಕಿಹಿಟ್ಟು, ಚಿರೋಟಿ ರವೇ ,ಇಂಗು, ಉಪ್ಪು ಸೇರಿಸಿ .. ಈಗ ಮಿಕ್ಸಿ ಜಾರಿಗೆ ತೆಂಗಿನ ತುರಿ, ಜೀರಿಗೆ, ಕೆಂಪು ಮೆಣಸಿನಕಾಯಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು, ಅದನ್ನು ಮೇಲಿನ ಮಿಶ್ರಣಕ್ಕೆ ಹಾಕಿ, ಅದರ ಮೇಲೆ ಒಂದು ಚಿಕ್ಕ ಸೌಟು ಕಾದ ಎಣ್ಣೆ ಹಾಕಿ.. ಮಿಶ್ರಣಕ್ಕೆ ನೋಡಿಕೊಂಡು ನೀರು ಹಾಕಬೇಕು… ಕೋಡುಬಳೆ ಹಿಟ್ಟು ತುಂಬಾ ತೆಳ್ಳಗೂ ಇರದೇ, ಹಾಗೆ ಗಟ್ಟಿಯಾಗೂ ಇರಬಾರದು. ಈಗ ಸ್ವಲ್ಪ ಸ್ವಲ್ಪ ದೊಡ್ಡ ಗೋಲಿ ಗಾತ್ರದ ಉಂಡೆಗಳನ್ನು ತೆಗೆದುಕೊಂಡು ,ಚೆನ್ನಾಗಿ ಹೊಸೆದು, ಉದ್ದುದ್ದ ಕಡ್ಡಿಗಳಂತೆ ಮಾಡಿಕೊಂಡು ಅಂಚುಗಳನ್ನು ಸೇರಿಸಿ ,ಇದನ್ನು ಕಾದ ಎಣ್ಣೆಯಲ್ಲಿ ಕರಿದರೆ ಕೋಡುಬಳೆ ಸಿದ್ಧವಾಗುತ್ತದೆ..