ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.31:- ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್‍ರವರ ಎರಡನೇ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು.
ಭಗತ್ ಸಿಂಗ್ ಯುವ ಸೇನೆ ಹಾಗೂ ಪುನಿತ್‍ರಾಜಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಏರ್ಪಡಿಸಿದ್ದ ಪುನೀತ್‍ರಾಜ್‍ಕುಮಾರ್ ವೃತ್ತದಲ್ಲಿ ಏರ್ಪಡಿಸಿದ ಎರಡನೇ ವರ್ಷದದಿ, ಪುನೀತ್ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಚಿತ್ರ ನಟ, ಪತ್ರಕರ್ತ ಶ್ರೀಸಾಯಿ ಮಂಜುಪುನೀತ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಉದ್ಘಾಟಿಸಿ ಮಾತನಾಡಿ, ಪುನೀತ್‍ರಾಜಕುಮಾರ್ ನಿಧನಕುರು ನಾಡಿಗೆ ತುಂಬಲಾರದ ನಷ್ಟವಾಗಿದೆ.
ಯುವ ಸಮುದಾಯದ ನೆಚ್ಚಿನ ನಟರಾಗಿದ್ದ ಪುನೀತ್ ಅವರತತ್ವ ಅದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಅಭಿಮಾನಿಯಾಗಿ ಅವರಂತೆ ಸದಾ ಕ್ರಿಯಾಶೀಲರಾಗಿ ದುಡಿಯುವ ಜೊತೆಗೆ ಸಮಾಜದ ಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗಬೇಕು. ಪುನೀತ್ ಅಶಯವನ್ನು ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರು ಮುನ್ನಡೆಯೋಣ ಎಂದರು.
ಪರಿಸರ ಪ್ರೇಮಿ ಹಾಗೂ ಈಶ್ವರಿ ಸ್ಕೂಲ್ ಆಫ್ ಮ್ಯೂಸಿಕಲ್ ಸಂಸ್ಥೆಯಸಿ,ಎಂ ವೆಂಕಟೇಶ್ ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಯುವಕರ ಕಣ್ಮಣಿ ಪುನೀತ್‍ರಾಜಕುಮಾರ್ ಅಕಾಲಿಕ ನಿಧನಯುವ ಸಮುದಾಯಕ್ಕೆ ಭಾರಿ ನೋವು ಉಂಟು ಮಾಡಿದೆ. ಡಾ. ರಾಜಕುಮಾರ್ ಅವರ ಕಿರಿಯ ಪುತ್ರನಾಗಿದ್ದ ಪುನೀತ್ ತಂದೆಯನ್ನು ಮೀರಿಸುವಷ್ಟು ಮಟ್ಟಕ್ಕೆ ಚಿತ್ರರಂಗದಲ್ಲಿ ಬೆಳೆದಿದ್ದರು. ಜೊತೆಗೆ ಸಮಾಜ ಸೇವೆಯ ಮಾಡುವ ಮೂಲಕ ಸಮಾಜದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿರ್ಗತಿಕರು, ವೃದ್ದರು, ಹಾಗೂ ಅನಾಥ ಮಕ್ಕಳಿಗೆ ನೆರವು ನೀಡಿಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.
ಇದೇ ವೇಳೆ ಸಿ,ಎಂ ವೆಂಕಟೇಶ್ ಹಾಗೂ ಚಿತ್ರ ನಟ ಶ್ರೀ ಸಾಯಿ ಮಂಜು, ಅವರನ್ನು ಸನ್ಮಾನಿಸಿದರು. ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಭಗತ್ ಯುವ ಸೇನೆ ಅಧ್ಯಕ್ಷ ಕಾಂತರಾಜ್, ಡೈರಿ ಅಧ್ಯಕ್ಷ ಕೋಡಿಮೋಳೆ ಗೋವಿಂದಶೆಟ್ಟಿ, ಗ್ರಾ,ಪಂ ಅಧ್ಯಕ್ಷ ನಟರಾಜು, ಗ್ರಾ,ಪಂ ಸದಸ್ಯ ಮಹದೇವಶೆಟ್ಟಿ, ನಾಗೇಶ್ ಅಪ್ಪು, ರಾಮ, ಲಕ್ಷ್ಮಣ, ಮನು, ಅಭಿμÉೀಕ್, ಶ್ರೀನಿವಾಸ್, ಸೋಹನ್, ದೇವರಾಜು, ಪ್ರೀತಮ್, ರಘು, ಪ್ರಕಾಶ್, ಸೇರಿದಂತೆ ಪುನೀತ್ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರು ಇದ್ದರು.