ಕೋಟ್ಯಾಂತ ರೂ ಬಾಳುವ ಸರ್ಕಾರಿ ಜಾಗ ವಶಕ್ಕೆ

ನಂಜನಗೂಡು. ಜೂ.07: ತಾಲೂಕು ದಂಡಾಧಿಕಾರಿ ಮೋಹನ್ ಕುಮಾರಿ ಹಾಗೂ ನಗರಸಭೆ ಆಯುಕ್ತ ರಾಜಣ್ಣ ಮತ್ತು ಪೆÇಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಂಜನಗೂಡು ನಗರದ ರಸ್ತೆಯ ಅಕ್ಕಪಕ್ಕದಲ್ಲಿ ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಇಂದು ವಶಪಡಿಸಿಕೊಂಡರು.
ಇಂದು ಬೆಳ್ಳಂಬೆಳಗ್ಗೆ 6:30 ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸ್ಥಳದಲ್ಲೇ ಜಾಗವನ್ನು ಅಳತೆ ಮಾಡಿಸಿ ಗುರುತಿಸಿ ಕಲ್ಲುಗಳನ್ನು ನಟಿಸಿದರು. ಸರ್ಕಾರ ಜಾಗವನ್ನು ಹೊಸ ಪಡಿಸಿಕೊಂಡರು. ಈ ಸಮಯದಲ್ಲಿ ಮಾತಿನ ಚಕಮಕಿ ನಡೆಯಿತು. ಆದರೂ ಕೂಡ ಖಡಕ್ ಅಧಿಕಾರಿ ತಾಸಿಲ್ದಾರ್ ಮೋಹನ್ ಕುಮಾರಿ ಸ್ಥಳದಲ್ಲಿದ್ದು ದಾಖಲೆ ಪರಿಶೀಲಿಸಿ ಮುಲಾಜಿಲ್ಲದೆ ಜಾಗವನ್ನು ಹೊಸ ಪಡಿಸಿಕೊಂಡರು.
ಸ್ಥಳಕ್ಕೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬಂದು ಪರ-ವಿರೋಧ ಚರ್ಚೆ ಮಾಡಿದರು. ಆದರೂ ಕೂಡ ಏನು ಮಾಡೋಕೆ ಆಗದೆ ಕೈಚೆಲ್ಲಿ ಕೂತರು ದಂಡಾಧಿಕಾರಿ ಮಾತನಾಡಿ ಮಾಜಿ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು. ಇವರಿಗೆ ಎಲ್ಲರಿಗೂ ಒಂದು ವರ್ಷದಿಂದಲೇ ನೋಟಿಸ್ ನೀಡಿದ್ದೇವೆ ನಿಮ್ಮ ಜಾಗದಲ್ಲಿ ನೀವೇ ಇರಿ ಸರ್ಕಾರಿ ಜಾಗವನ್ನು ಬಿಡುವಂತೆ ಹೇಳಿದರೂ ಕೂಡ ನಮ್ಮ ಮಾತಿಗೆ ಸ್ಪಂದಿಸಲಿಲ್ಲ. ಆದ್ದರಿಂದ ಕಾನೂನು ಪ್ರಕಾರ ನಾವು ಬಂದು ಅಳತೆ ಮಾಡಿ ಸರ್ಕಾರಿ ಜಾಗವನ್ನು ಹೊಸ ಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ನಂಜಂನಗೂಡು ಪ್ರಮುಖ ಮುಖಂಡರು ಇವರುಗಳು ಇವರು ನಮ್ಮ ಕೈಜೋಡಿಸಿ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕು ಇವರೇ ಈ ರೀತಿ ಮಾಡಿದರೆ ಹೇಗೆ ಎಂಬ ಮರು ಪ್ರಶ್ನೆಯನ್ನು ಹೇಳಿದರು ಒಟ್ಟಿನಲ್ಲಿ ಸುಮಾರು ವರ್ಷದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಾಗವನ್ನು ಇಂದು ವಶಪಡಿಸಿಕೊಂಡರು.
ದಂಡಾಧಿಕಾರಿ ಮೋಹನ್ ಕುಮಾರಿ ಮಾತನಾಡಿ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸರಕಾರಗಳನ್ನು ಹೊಸ ಮಾಡಿಸಿಕೊಳ್ಳುತ್ತಿದ್ದೇನೆ ಇದರ ಜೊತೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಅದನ್ನು ಕೂಡ ಅಳತೆ ಮಾಡಿಸಿ ವಶಕ್ಕೆ ಪಡೆಯುತ್ತೇವೆ.
ಕೆಲವು ದಿನಗಳಲ್ಲಿ ಕೆರೆಗಳ ಒತ್ತುವರಿಗಳ ಬಗ್ಗೆ ಕ್ರಮ ಮತ್ತು ಜಾಗ ವಶಕ್ಕೆ ಪಡೆಯುತ್ತೇನೆ ಎಂದರು.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್, ಪಿಎಸ್‍ಐ ರವಿಕುಮಾರ್, ಪೆÇಲೀಸ್ ರಾಚಪ್ಪ, ಸಿದ್ದರಾಜು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲೂಕು ಆಡಳಿತಾಧಿಕಾರಿಗಳು ನಗರಸಭೆ ಅಧಿಕಾರಿಗಳು ಪೆÇಲೀಸ್ ಇಲಾಖೆ ಅಧಿಕಾರಿಗಳಿದ್ದರು.