
ಬಸವನಬಾಗೇವಾಡಿ:ಆ.24: ಕೋಟ್ಯಾಂತರ ಭಾರತೀಯರ ಜನರ ಕನಸು ನನಸು ಮಾಡಿದ ಭಾರತೀಯ ಇಸ್ರೋ ವಿಜ್ಞಾನಿಗಳ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದಕ್ಕೆ ಬಹಳ ಹೆಮ್ಮೆಯಾಗಿದೆ ಎಂದು ಜವಳಿ ಮತ್ತು ಕಬ್ಬು ಅಭಿವೃದ್ಧಿ ಸಕ್ಕರೆ ನಿರ್ದೇಶನಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ್ ಪಾಟೀಲ್ ಅವರು ಹೇಳಿದರು ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದಕ್ಕೆ ಬಸವನಬಾಗೇವಾಡಿ ಪಟ್ಟಣದಲ್ಲಿ ಸಚಿವರು ತಮ್ಮ ಬೆಂಬಲಿಗರೊಂದಿಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ನಂತರ ಮಾತನಾಡಿದ ಅವರು ನಮ್ಮ ವಿಜ್ಞಾನಿಗಳ ಬಹುದಿನದ ಪ್ರಯತ್ನದಿಂದ ಇಂದು ಚಂದ್ರವು ನಮ್ಮ ಅಂಗೈಯಲ್ಲಿ ಇದೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ ವಿಶ್ವದ ಅನೇಕ ರಾಷ್ಟ್ರಗಳು ಚಂದ್ರಯಾನ ಮೇಲೆ ಸಂಶೋಧನೆ ಮಾಡಲು ಸಾಕಷ್ಟು ದುಡ್ಡನ್ನು ಖರ್ಚು ಮಾಡುತ್ತಾರೆ ಆದರೆ ನಮ್ಮ ಭಾರತೀಯ ಇಸ್ರೋ ವಿಜ್ಞಾನಿಗಳು ಕಡಿಮೆ ವೆಚ್ಚದಲ್ಲಿ ಅಭೂತಪೂರ್ವವಾದಂತಹ ಕಾರ್ಯವನ್ನು ಮಾಡಿ ಇಡೀ ಜಗತ್ತಿನಲ್ಲಿ ನಮ್ಮ ವಿಜ್ಞಾನಿಗಳು ಪ್ರಭಾವಿಗಳು ಎಂದು ತಿಳಿಸಿಕೊಟ್ಟಿದ್ದಾರೆ ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಅವರು ಸಚಿವರಿಗೆ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಹಾರಿವಾಳ ಯುವ ಕಾಂಗ್ರೆಸ್ ನ ಜೀವನ್ ಮ್ಯಾಗೇರಿ ಬಸವರಾಜ್ ನಾಯ್ಕೋಡಿ ಶಿವಾನಂದ ತೊಳನೂರ ಬಸವರಾಜ್ ಚಿಂಚೋಳಿ ಪ್ರವೀಣ್ ಪಾಟೀಲ್ ಶಿವು ಮಡಿಕೇಶ್ವರ್ ಕೊಟ್ರೇಶಿ ಹೆಗಡ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು