ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ

ಗದಗ,ಮಾ20: ನಗರದಲ್ಲಿ ಮಾ.18 ರಂದು ತಾಲೂಕಾ ತಂಬಾಕು ನಿಯಂತ್ರಣ ತನಿಖಾ ದಳ ಗದಗ ನಗರದ ತಹಶಿಲ್ದಾರ ಕಚೇರಿ ಹಾಗೂ ಮುನಿಸಿಪಲ್ ಶಾಲೆಯ ಸುತ್ತ ಮುತ್ತ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲಾಯಿತು.
ನಗರದ ವಿವಿದೆಡೆ ಪಾನ್‍ಶಾಪ್, ಹೊಟೆಲ್ ಹಾಗೂ ಬಾರ್‍ಗಳಲ್ಲಿ ಮಿತಿಯಿಲ್ಲದೆ ಧೂಮಪಾನ ಮಾಡಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಅರಿವಿಲ್ಲದೆ ಕ್ಯಾನ್ಸರ್ ಹಾಗೂ ಇತರೆ ಕಾಯಿಲೆಗೆ ಬಲಿಯಾಗುವ ಸಾಧ್ಯತೆಯಿದೆ. ಕೆಲವು ಪಾನ್ ಶಾಪ್‍ಗಳಲ್ಲಿ ಅನಧಿಕೃತ ಧೂಮಪಾನ ಮಾಡುವ ಅಡ್ಡಾಗಳನ್ನು ಮಾಡಿ ಕಾಯ್ದೆ ಉಲ್ಲಂಘನೆ ಜೊತೆಗೆ ಅಮಾಯಕ ಆರೋಗ್ಯದ ಮೇಲೂ ಪರಿಣಾಮ ಬಿರುವಂತೆ ಮಾಡಲಾಗುತ್ತಿದೆ. ಇಂತಹ ಅಡ್ಡಾಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಯಿತು. ಅಂಗಡಿ ಮುಗ್ಗಟ್ಟು ಹೊಟೆಲ್ ಇನ್ನಿತರ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ನಾಮಫಲಕ ಕಡ್ಡಾಯವಾಗಿ ಬಿತ್ತರಿಸಬೇಕು.
ಶಾಲಾ ಕಾಲೇಜು ಆವರಣದಿಂದ 100 ಗಜ ಅಂತರದ ವರೆಗೆ ತಂಬಾಕು ಮಾರಾಟ ಬಳಕೆ ನಿಷೇಧವೆಂದು ಕಾನೂನು ಇದ್ದರು ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳ ಸುತ್ತ ತಂಬಾಕು ಮಾರಾಟ ಮಾಡಲಾಗುತ್ತಿದ್ದು ಇಂತವರ ವಿರುದ್ಧ ಕಾನೂನುರೀತಿ ಕ್ರಮ ಕೈಗೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಸುತ್ತ ಮುತ್ತ 100ಗಜದ ಅಂತರದವರೆಗೆ ತಂಬಾಕು ಮಾರಾಟ ಮಾಡುವ ಅಂಗಡಿಗಳು ಕಂಡುಬಂದಲ್ಲಿ ಅಂತವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು ಅಂಗಡಿ ಪರವಾನಿಗೆ ರದ್ದುಗೊಳಿಸಲಾಗುವದು ಎಂದು ಉಪ ತಹಶೀಲ್ದಾರರು ತಿಳಿಸಿದರು.
ದಾಳಿ ನಡೆಸುವ ತನಿಖಾದಳದಲ್ಲಿ ವೃತ್ತ ಪೊಲೀಸ್ ನಿರೀಕ್ಷಕರು ಗದಗ ಶಹರ ಠಾಣೆ ಪಿ.ವಿ.ಸಾಲಿಮಠ. ತಾಲೂಕಾ ವೈದ್ಯಾಧಿಕಾರಿ ಡಾ.ಎಸ್.ಎಸ್. ನೀಲಗುಂದ, ಗದಗ ಬೆಟಗೇರಿ ನಗರಸಭೆಯ ಪರಿಸರ ಅಭಿಯಂತರ ಗೀರೀಶ ತಳವಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ಸಲಹೆಗಾರ ಗೋಪಾಲಾ ಸುರಪುರ, ಕಾರ್ಮಿಕ ನಿರೀಕ್ಷಕರು ಅನುರಾಧ, ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಡಿ.ಎಸ್.ಅಂಗಡಿ, ಪೊಲೀಸ್ ಇಲಾಖೆಯ ಎಂ.ಜಿ. ನಾರಾಯಣ, ಪಿ.ಎಸ್.ಐ ಜೆ.ಹೆಚ್.ಅಲಗುಂದಿ, ಎ.ಎಸ್.ಐ. ಎಂ.ಎಸ್.ಪಾಟೀಲ್ ಎ,ಎಸ್.ಐ. ಮಹಾಂತೇಶ ಸ್ವಾಮಿ ಹಾಗೂ ಎನ್.ಸಿ. ಮೂಲಿಮನಿ. ಪಿ.ಸಿ.ಗಳಾದ ಯಲ್ಲಪ್ಪ ಹಕ್ಕಿ, ಶಿಕ್ಷಣ ಸಂಯೋಜಕರು ಚಂಪಾ, ಬಿ.ಇ.ಓ. ಕಚೇರಿ ಗ್ರಾಮಿಣ ಗದಗರವರು ಹಾಜರಿದ್ದರು.