ಕೋಟ್ಪಾ ಕಾಯ್ದೆಯಡಿ ಹಠಾತ್ ದಾಳಿ, ಹಲವರಿಗೆ ದಂಡ

ಅಥಣಿ :ಜ.5: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಕೋಟ್ಪಾ ಕಾಯ್ದೆ ಅನ್ವಯ ಆರೋಗ್ಯ ಇಲಾಖೆ ಹಾಗೂ ಪೆÇಲೀಸ್ ಇಲಾಖೆ ಜಂಟಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಆಸ್ಪತ್ರೆಯ ವ್ಯಾಪ್ತಿಯಲ್ಲಿ 100 ಮೀಟರ್ ಒಳಗಡೆ ತಂಬಾಕು ಮಾರಾಟ ಉತ್ಪನ್ನಗಳನ್ನು ಮಾಡುತ್ತಿದ್ದ ಟೀ ಸ್ಟಾಲ್ ಹಾಗೂ ಪಾನ್ ಶಾಪ್ ಅಂಗಡಿಗಳ ಮೇಲೆ ಹಠಾತ್ ದಾಳಿ ನಡೆಸಿ ದಂಡ ವಿಧಿಸಿ ಅಂಗಡಿಕಾರರಿಗೆ ಚುರುಕು ಮುಟ್ಟಿಸಿದರು,
ಈ ವೇಳೆ ತಾಲೂಕಾ ಆರೋಗ್ಯಾಧಿಕಾರಿ ಬಸಗೌಡಾ ಕಾಗೆ ಮಾತನಾಡಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ರೋಗಗಳು ಬರುತ್ತವೆ ಎಲ್ಲ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ದೊಡ್ಡ ಇದು ಅಪಾಯವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟದ ಕಾಯಿಲೆಗಳು ಸೇರಿದಂತೆ ಹೆಚ್ಚಿನ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆಗೆ ಇದು ಅಪಾಯಕಾರಿ ಅಂಶವಾಗಿದೆ. ಬಾಯಿಯ ಕ್ಯಾನ್ಸರ್ ನಾಲಿಗೆ, ಶ್ವಾಸಕೋಶದ ಕ್ಯಾನ್ಸರ್. ಹೃದಯ-ನಾಳೀಯ ಕಾಯಿಲೆಗಳು ಹಾಗೂ 40% ಟಿಬಿ ಮತ್ತು ಇತರ ಸಂಬಂಧಿತ ಕಾಯಿಲೆಗಳು ತಂಬಾಕು ಸೇವನೆಯಿಂದಾಗಿ ಬರುತ್ತವೆ ಎಂದರು,

ಈ ವೇಳೆ ಪಿಎಸಐ ಶಿವಶಂಕರ್ ಮುಖರಿ ಮಾತನಾಡಿ ಶಾಲಾ-ಕಾಲೇಜು, ಆಸ್ಪತ್ರೆಗಳು, ಬಸ್ ನಿಲ್ದಾಣ, ಥಿಯೇಟರ್, ಹೊಟೇಲ್, ಸಮುದಾಯ ಭವನಗಳು, ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ನಿಷೇಧವಿದೆ ಇಂದು ಕೆಲವು ಪಾನ್ ಶಾಪ್ ಗಳು ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ ಪ್ರಕಾರ
ಹಲವರಿಗೆ ದಂಡ ವಿಧಿಸಿ ದಂಡ ವಸೂಲಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ನಡೆಸದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಆರೋಗ್ಯ ಇಲಾಖೆಯ ತಾಲೂಕಾ ಸೀನಿಯರ್ ಪ್ರಭು ದೊಡ್ಡಮನಿ, ಸೇರಿದಂತೆ ಪೆÇೀಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು,