ಕೋಟೆ ಎದುರಿನ ರಸ್ತೆ ದುರಸ್ತಿಗೆ ಆಗ್ರಹ

ಕಲಬುರಗಿ ಅ 31: ನಗರದ ಮುಖ್ಯ ಅಂಚೆಕಚೇರಿ ಮತ್ತು ಐತಿಹಾಸಿಕ ಖ್ಯಾತಿಯ ಕೋಟೆಯ ಮುಖ್ಯದ್ವಾರದ ಎದುರಿನ ರಸ್ತೆ ಬಹುತೇಕ ಕಡೆ ಗುಂಡಿಗಳು ಬಿದ್ದು ಹಾಳಾಗಿದೆ. ಇದು ನಗರದ ಒಂದು ಪ್ರಮುಖ ರಸ್ತೆಯಾಗಿದ್ದು ಈ ರಸ್ತೆಯಲ್ಲಿನ ಸರಕಾರಿ ಕಚೇರಿಗಳಿಗೆ ಕಾರ್ಯ ನಿಮಿತ್ತ ಮತ್ತು ಐತಿಹಾಸಿಕ ತಾಣ ಕೋಟೆ ವೀಕ್ಷಿಸಲು ಜನ ಹೆಚ್ಚಾಗಿ ಬರುತ್ತಾರೆ.
ರಸ್ತೆ ಹದಗೆಟ್ಟ ಕಾರಣದಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ.ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.