ಕೋಟೆಗೋಡೆ ಮಹಾಲಕ್ಷ್ಮೀ ಜಾತ್ರೋತ್ಸವ

ತಾಳಿಕೋಟೆ:ನ.12: ಸ್ಥಳೀಯ ಶ್ರೀ ಲಕ್ಷ್ಮೀ ಉತ್ಸವ ಸಮಿತಿ ವತಿಯಿಂದ ಡೋಣಿ ತೀರದಲ್ಲಿರುವ ಕೋಟೆಗೋಡೆಯ ಶ್ರೀ ಮಹಾಲಕ್ಷ್ಮೀ ಜಾತ್ರೋತ್ಸವವು ದಿ. 11 ಶುಕ್ರವಾರರಂದು ವಿಜೃಂಬಣೆಯಿಂದ ಜರುಗಿತು.

ದಿ.ವೇ.ಪಂ.ಪುರುಷೋತ್ತಮಾಚಾರ್ಯ ಗ್ರಾಂಪುರೋಹಿತ ಗುರುಗಳವರ ಸಹೋದರರಾದ ಶ್ರೀ ಶ್ರೀಧರ ಗ್ರಾಮಪುರೋಹಿತ ಹಾಗೂ ಶಿಷ್ಯಂದಿರರಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು.

ಬೆಳಿಗ್ಗೆ 8 ಗಂಟೆಯಿಂದ ಗಂಗಸ್ಥಳ, ಗ್ರಹ ಯಜ್ಞ, ಶ್ರೀ ಸೂಕ್ತಹೋಮ ಹಾಗೂ ನಾಗಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು. ಮದ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ತೀರ್ಥ ಪ್ರಸಾದ ಜರುಗಿತಲ್ಲದೇ ಸಾಯಂಕಾಲ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಸುಮಂಗಲೆಯರು ಲಕ್ಷ್ಮೀ ಸೋಬಾನ ಹಾಡನ್ನು ಹಾಡಿ ಭಕ್ತಿಭಾವ ಮೆರೆದರು.

ಈ ಕಾರ್ಯಕ್ರಮದಲ್ಲಿ ಶ್ರೀಧರ ಗ್ರಾಂಪುರೋಹಿತ, ವಸಂತ ಜೋಶಿ, ಸಂತೋಷ ಜೋಶಿ, ಗುಂಡು ಜೋಶಿ, ಅಕ್ಷಯ ಜೋಶಿ, ಭೀಮಭಟ್ಟ ಜೋಶಿ, ವೇಂಕಟೇಶ ಆಚಾರ್ಯ ಗ್ರಾಂಪುರೋಹಿತ, ಸಂಜೀವಾಚಾರ್ಯ ಗ್ರಾಂಪುರೋಹಿತ, ರಾಘವೇಂದ್ರ ಉಡಪಿ ಅವರು ಶ್ರೀ ದೇವಿಯ ಕಾರ್ಯಕ್ರಮವನ್ನು ನೆರವೇರಿಸಿದರು.

ಶ್ರೀ ಲಕ್ಷ್ಮೀ ಉತ್ಸವ ಸಮಿತಿಯ ಅಧ್ಯಕ್ಷರಾದ ತಿರುಪತಿ ಹಂಚಾಟೆ, ಅಶೋಕ ಪತ್ತಾರ, ರಾಘವೇಂದ್ರರಾವ್, ಗುಂಡುದಾದಾ, ಅಶೋಕ ಪತ್ತಾರ, ರಾಘು ಕಮ್ಮಾರ, ನಾಗೇಶ ಹಂಚಾಟೆ, ತುಳಸಿರಾಮ, ಧಶರಥ್, ಶ್ರೀಕಾಂತ ಮೊದಲಾದವರು ನೇತೃತ್ವ ವಹಿಸಿದ್ದರು.

ಉಡಿ ತುಂಬುವ ಸೇವಾ ಕಾರ್ಯಕ್ರಮದ ಸೇವೆಯನ್ನು ವಿಕಾಸ ಜ್ಯೂವೇಲರ್ಸ್ ತಾಳಿಕೋಟೆ, ಪ್ರೋ. ಮೌನೇಶ ಪತ್ತಾರ ಅವರು ಸಲ್ಲಿಸಿದರು.