`ಕೋಟಿ’ ನೋಡಿದ್ದೇ, ಜನ ಕೊಟ್ಟಾಗ : ಡಾಲಿ ಧನಂಜಯ

“ಬಡವ ರಾಸ್ಕಲ್” ಚಿತ್ರದಲ್ಲಿ ಜನರು ಕೊಡುವ ತನಕ “ಕೋಟಿ” ರೂಪಾಯಿ ನೋಡಿಯೇ ಇರಲಿಲ್ಲ. ಅಲ್ಲಿ ತನಕ ಒಂದು ಕೋಟಿ ಸಿಕ್ಕರೆ ಜೀವನ ಹೇಗೆಲ್ಲಾ ಇರುತ್ತೆ ಅಲ್ವಾ ಎನ್ನುವ ಕನಸು ಇತ್ತು ಆದರೆ  ಆ “ಕೋಟಿ” ನೋಡಬೇಕಾದರೆ ಜನರೇ ಕೈ ಹಿಡಿಯಬೇಕಾಯಿತು. ನಟ ರಾಕ್ಷಸ ಡಾಲಿ ಧನಂಜಯ “ಕೋಟಿ’ಯ ಬಗ್ಗೆ ಹೇಳಿಕೊಂಡಿದ್ದು ಹೀಗೆ.

ಜಗತ್ತಿನಲ್ಲಿ ಸಾಲ ಮಾಡದೇ ಇರೋದು, ಬಡ್ಡಿ ಕಟ್ಟದೇ ಇರೋರು ಯಾರಿದ್ದಾರೆ ಹೇಳಿ, “ಬಡವ ರಾಸ್ಕಲ್” ಚಿತ್ರದ ತನಕ ಅನೇಕ ಚಿತ್ರ ಮಾಡಿದ್ದೆ , ಆದರೆ ಆವು ಯಾವುವು ನನ್ನ ಚಿತ್ರ ಆಗಿರಲಿಲ್ಲ, ಆ ಚಿತ್ರದಲ್ಲಿ ನಾನೊಂದು ಪಾತ್ರ ಮಾಡಿದ್ದೆ ಅಷ್ಟೇ ಹೊಸ ಚಿತ್ರ “ಕೋಟಿ” ಟೀಸರ್ ಬಿಡುಗಡೆ ವೇಳೆ ಮಾತಿಗಿಳಿದ ಧನಂಜಯ, ಕೋಟಿ ಸಾಮಾನ್ಯ ವ್ಯಕ್ತಿಯ ಕಥೆ.  ಸರಳವಾಗಿರುವ ಇರುವ ಪಾತ್ರ ಮಾಡುವುದೇ ದೊಡ್ಡ ಸವಾಲು, ಇದುವರೆಗೂ ಯಾವ ಚಿತ್ರದಲ್ಲಿಯೂ,ಎಲ್ಲಿಯೂ ಕಾಣದ ವಿಭಿನ್ನ ಪಾತ್ರ. ಡಾಲಿ, ಸೀನ, ಮೀಠಾಯಿ ಸೀನ, ರತ್ನಾಕರ, ಇದೀಗ ಕೋಟಿ, ಹೀಗೆ ಬೇರೆ ಬೇರೆ ಪಾತ್ರ ಮಾಡುತ್ತಿದ್ದೇನೆ, ನಾನೊಬ್ಬ ವರ್ಸಟೈಲ್ ಆಕ್ಟರ್, ಎಲ್ಲ ರೀತಿಯ ಪಾತ್ರ ಮಾಡುವುದು ನನ್ನ ಉದ್ದೇಶ.

ಕೋಟಿ, ಜನಸಾಮಾನ್ಯರ ಕಥೆ, ಹೀಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ, ಕೋಟಿ ಕಾಡುವ ಕಥೆ, ಒಳ್ಳೆಯ ಕಥೆ ನಟನ್ನು ಎಕ್ಸೈಟ್ ಮಾಡಿದಷ್ಟು ಮತ್ಯಾವುದು ಮಾಡಲಾರದು,ಅಂತಹ ಶಕ್ತಿ ನಿರ್ದೇಶಕ ಮತ್ತು ಕಥೆಗಾರರಲ್ಲಿದೆ. ಕಳ್ಳತನ ಮಾಡ್ದೆ, ಮೋಸ ಮಾಡ್ದೆ , ಯಾರ್ ತಲೆನೋ ಹೊಡಿದೆ ನಿಯತ್ತಾಗಿ ಊರಲ್ಲಿ ಬದುಕಲು ಆಗಲ್ವಾ ಎನ್ನುವ ಒಂದು ಸಾಲು “ಕೋಟಿ” ಚಿತ್ರದ ಪಾತ್ರದ ಬಗ್ಗೆ ಮಾತನಾಡುತ್ತಿದೆ ಎಂದರು.

ನಟಿ ಮೋಕ್ಷಾ, ಸಾಕಷ್ಟು ಕಥೆಗಳು ಬರುತ್ತಿವೆ. ಒಳ್ಳೆಯ ಕಥೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿವೆ. ಕೋಟಿಯಲ್ಲಿಯೂ ಒಳ್ಳೆಯ ಕತೆ ಇದೆ ಎಂದರು. ಚಿತ್ರಕ್ಕೆ ಕೈಜೋಡಿರುವ ಪ್ರಕಾಶ್ ವೀರ್, ಕಲಾವಿದ ರಮೇಶ್ ಇಂದಿರಾ ಸೇರಿದಂತೆ ಮತ್ತಿತರು ಮಾಹಿತಿ ಹಂಚಿಕೊಂಡರು.

ಓದುವುದು ಇಷ್ಟ

“ಕಥೆ ಕೇಳುವುದಕ್ಕಿಂತ ಓದುವುದು ನನಗೆ ಇಷ್ಟ, ಇದೇ ಕಾರಣಕ್ಕೆ ಯಾರಾದರೂ ಕಥೆ ಹೇಳಲು ಬರುತ್ತೇನೆ ಎಂದರೆ ಸ್ಕ್ರಿಪ್ಟ್ ಕಳುಹಿಸಿ ಅನ್ನುವೆ. ಕಥೆ ಕೇಳುವುವಾಗ ಒಪ್ಪಿಗೆ ಆಗದಿದ್ದರೆ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಕಾಡುತ್ತೆ. ಜೊತೆಗೆ ಎರಡು ಗಂಟೆ ಕಥೆ ಕೇಳುವಾಗ ಇಷ್ಟವಾಗದಿದ್ದರೆ ಆಕಳಿಕೆ, ತೂಕಡಿಕೆ ಬರುತ್ತೆ, ಇದು ಒಂದು ರೀತಿ ಸಂಕಟ, ಈ ಕಾರಣಕ್ಕೆ ಕತೆ ಓದುವುದು ನನ್ನ ಆಯ್ಕೆ. ಈ ರೀತಿ ಸ್ಕಿಪ್ಟ್ ಓದಿದ ಚಿತ್ರಗಳು ಯಶಸ್ಸು ಕಂಡಿವೆ.’’ – ಡಾಲಿ ಧನಂಜಯ, ನಟ

ಜೂ,14ಕ್ಕೆ ತೆರೆಗೆ

“ಕೋಟಿ” ಚಿತ್ರ ಮೈಸೂರು ಸುತ್ತ ಮುತ್ತ 85 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು ಜೂನ್ 14 ರಂದು ತೆರೆಗೆ ಬರಲಿದೆ, ಜಿಯೋ ಸ್ಟುಡಿಯೋನ ಜ್ಯೋತಿ ದೇಶಪಾಂಡೆ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ ಕಥೆ ಬರೆಯುವಾಗ ಧನಂಜಯ ಇರಲಿಲ್ಲ, ಅವರ ಪರಿಚಯವಾದ ನಂತರ ಅವರೇ ಸೂಕ್ತ ಅನ್ನಿಸಿತು. ಹೀಗಾಗಿ ಆಯ್ಕೆ ಮಾಡಲಾಯಿತು. “ಕೋಟಿ’ ಶೀರ್ಷಿಕೆ ಹುಟ್ಟಿದ್ದೇ ರೋಚಕ ಎಂದರು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಪರಮೇಶ್ ಗುಂಡ್ಕಲ್.