ಕೋಟನೂರ ಹಲ್ಲೆ ಖಂಡಿಸಿ ಮನವಿ

ಕಾಳಗಿ. ಮೇ.2: ಕಲಬುರ್ಗಿ ಜಿಲ್ಲೆಯ ಕೋಟನೂರು (ಡಿ ) ಗ್ರಾಮದಲ್ಲಿ ಮೊನ್ನೆ ಲಿಂಗಾಯತ ಸಮಾಜ ಮನೆಯ ಮೇಲೆ ಹಲ್ಲೆ ಖಂಡಿಸಿ ತಾಲೂಕು ಶ್ರೀ ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೋಟನೂರ ಗ್ರಾಮದಲ್ಲಿ ದಿನಾಂಕ 23-01- 2024 ರಂದು ಡಾ. ಬಿ. ಆರ್. ಅಂಬೇಡ್ಕರ್ ಪುತ್ತಳಿಗೆ ಅವಮಾನ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು. ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದವರನ್ನು ಕಾನೂನು ಮೂಲಕ ಶಿಕ್ಷೆಯಾಗಬೇಕು. ಆದರೆ ಜಾಮೀನು ಮೂಲಕ ಹೊರಗೆ ಬಂದವರು. ಸಂಗಮೇಶ ಪಾಟೀಲ್ ಎಂಬುವವರ ಮನೆಗೆ ಕೆಲ ದುಷ್ಕರ್ಮಿಗಳು ರಾತ್ರಿಯ ಸಮಯದಲ್ಲಿ ಮನೆಗೆ ನುಗ್ಗಿ ಮನೆಯಲ್ಲಿ ಅವರ ತಾಯಿ, ಹೆಂಡತಿ ಹಾಗೂ ಅಕ್ಕ-ಪಕ್ಕ ಮನೆಯ ಸಮಾಜದ ಬಂಧುಗಳ ಮೇಲೆ ಮನೆಯ ಮೇಲೆ ಹಲ್ಲೆ ಮಾಡಿರುವುದು ವೀರಶೈವ ಲಿಂಗಾಯತ ಮಹಾ ವೇದಿಕೆ ಉಗ್ರವಾಗಿ ಖಂಡಿಸುತ್ತದೆ. ಕೂಡಲೇ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಉಗ್ರವಾದ ಶಿಕ್ಷೆ ನೀಡಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಹಿಂದೂ ಸಮಾಜ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆ ಕಾಳಗಿ ತಾಲೂಕ ಅಧ್ಯಕ್ಷ ಆನಂದ ಕೇಶ್ವರ, ಜಗದೀಶ್ ಪಾಟೀಲ್, ರೇವಣಸಿದ್ಧ ಬಡಾ, ಶಂಕರ ಚೋಕಾ, ರಾಜಶೇಖರ ಗುಡದಾ, ವಿಶ್ವನಾಥ ಅಂಕಲಗಿ, ಕಾಳು ಪಡಶೆಟ್ಟಿ, ಅಮೃತರಾವ ಪಾಟೀಲ, ಶೇಖರ್ ಮಾನಶೆಟ್ಟಿ, ಮಲ್ಲಿಕಾರ್ಜುನ ಮಲಕೂಡ ಸೇರಿದಂತೆ ಅನೇಕರಿದ್ದರು.