ಕೋಟಗಾ ಗ್ರಾಮದ ಮರಳು ದಂದೆಗೆ ಕಡಿವಾಣ ಹಾಕಿ

ಚಿಂಚೋಳಿ:ನ.3: ತಾಲೂಕಿನ ಕೋಟಗಾ ಗ್ರಾಮದಲ್ಲಿ ಈಗ ಮುಲ್ಲಾಮರಿ ನದಿದಡದಲ್ಲಿ ಶೇಕರಣೆಗೊಂಡಿರುವ ಮರಳು ನೋಡುಗರಿಗೆ ಅಕರ್ಷಣಿಯ ಹಾಗೂ ಸುಂದರವಾಗಿ ಕಾಣುತ್ತಿದೆ ನೈಸರ್ಗಿಕ ಸಂಪನ್ಮೂಲ ರಕ್ಷಣೆಯಿಂದ ಇಲ್ಲಿನ ಜಾನುವಾರುಗಳಿಗೆ ಮತ್ತು ಜನ ಸಾಮಾನ್ಯರಿಗೆ ಅಂತರಜಲ ಹೆಚ್ಚಾಗುವ ಮೂಲಕುಲು ಅನುಕೂಲವಾಗಿದೆ.
ಆದರೆ ಈ ಗ್ರಾಮದಲ್ಲಿ ಅಕ್ರಮ ಮರಳು ದಂದೆ, ವ್ಯಾಪಾರ ಜೋರಾಗಿ ನಡೆದಿದ್ದು ದಿನಕ್ಕೆ 40 ರಿಂದ 50 ಟ್ರಾಕ್ಟರ್ ಮರಳು ಸಾಗಿಸುತ್ತಿರುವ ಕುರಿತು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅಕ್ರಮ ಮರಳು ಸಾಗಣಿಕೆಗೆ ಕಡಿವಾಣ ಹಾಕಬೇಕು ಎಂದು ಕೋಟಗಾ ಗ್ರಾಮದ ಮುಖಂಡರಾದ ಸಂಗ್ರಾವi ಅವರು ಮನವಿ ಮಾಡಿದ್ದಾರೆ.