ಕೋಲಾರ,ಜು.೧೮-ಕೋಚಿಮುಲ್‌ನಿಂದ ಮಾಲೂರು ತಾಲ್ಲೂಕಿನ ಟೇಕಲ್‌ನಲ್ಲಿ ೧೫ ಮಂದಿಗೆ ಶನಿವಾರ ಶಾಸಕ ಕೆ.ವೈ.ನಂಜೇಗೌಡ ರಾಸು ವಿಮಾ ಪರಿಹಾರ, ವಯೋ ನಿವೃತ್ತಿ ಪರಿಹಾರ ಕೋಮುಲ್ ವಿಮಾ ಯೋಜನೆಯಲ್ಲಿ ಮರಣ ಹೊಂದಿರುವ ಫಲಾನುಭವಿಗಳಿಗೆ ಪರಿಹಾರವಾಗಿ ೧.೧೦ ಕೋಟಿರೂ. ಚೆಕ್‌ಗಳನ್ನು ವಿತರಿಸಿದರು.
ಹಾಲು ಉತ್ಪಾದಕರ ಸಂಘಗಳಲ್ಲಿ ಬಹಳ ವರ್ಷಗಳಿಂದ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ ಹುದ್ದೆಗೆ ಅನುಗುಣವಾಗಿ ೨ ಲಕ್ಷದಿಂದ ೭೫೦೦೦ ಸಾವಿರ ರೂ. ವರೆಗೆ ವಯೋನಿವೃತ್ತಿ ಪರಿಹಾರಧನ ಹಾಗೂ ಹಾಲು ಉತ್ಪಾದಕರಲ್ಲಿ ಯಾರಾದರೂ ಆಕಸ್ಮಿಕ ಮರಣ ಹೊಂದಿದವರಿಗೆ ಕೋಮುಲ್ ವಿಮಾ ನೀಡಲಾಗುತ್ತದೆ ಎಂದರು.
ಹಾಲು ಉತ್ಪಾದಕರು ರಾಸುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು, ಹಾಲು ಉತ್ಪಾದಕ ಸಂಘಗಳು ಹಾಲು ಉತ್ದಾದನೆ, ಗುಣಮಟ್ಟವನ್ನು ಕಾಪಾಡಿಕೊಂಡು ಹೋದಾಗ ಮಾತ್ರ ಒಕ್ಕೂಟಕ್ಕೆ ಹೆಸರು ಬರುತ್ತದೆ ಎಂದರು.
ಮಾಲೂರು ಶಿಬಿರಾಧಿಕಾರಿ ಡಾ.ಲೋಹೀತ್ ವಿಸ್ತರಣಾಧಿಕಾರಿಗಳಾದ ನಾರಾಯಣಸ್ವಾಮಿ, ಶಿವಕುಮಾರ್, ಮನೋಹರ್‌ರೆಡ್ಡಿ, ಉಲ್ಲೂರಪ್ಪ, ವೆಂಕಟೇಶ್, ತೊರಲಕ್ಕಿ ಡೇರಿಯ ಸಿಇಓ ರಮೇಶ್ ಇದ್ದರು.