ಕೋಗಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಫೆ.07 ತಾಲೂಕಿನ ಕೋಗಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ ಹಾಗೂ ಎರಡು ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾಯಕಲ್ಪ ರಾಜ್ಯ ಮಟ್ಟದ ಪ್ರಶಸ್ತಿ ಸಮಾರಂಭ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯನ್ನು ಆರೋಗ್ಯ ಸಚಿವ . ದಿನೇಶ್ ಗುಂಡೂರಾವ್ ವಿತರಿಸಿದರು
ಈ ಸಂದರ್ಭದಲ್ಲಿ ಎಂಡಿ.ಎನ್.ಹೆಚ್.ಎಂ. ಡಾ ನವೀನ ಭಟ್.  ಜೆ.ಎನ್.ಶ್ರೀವಾಸ್ತವ ಸಲಹೆಗಾಗರು ಗುಣಮಟ್ಟ ಮತ್ತು ರೋಗಿಯ ಆರೈಕೆ ಎನ್ ಹೆಚ್ ಎಸ್ ಆರ್ ಸಿ ನವದೆಹಲಿ ಭಾರತ ಸರ್ಕಾರ ಡಾ.ರಾಜಕುಮಾರ ರಾಜ್ಯ ಡಿ ಡಿ ಅಧಿಕಾರಿಗಳು.,  ಪಿ.ಡಿ.ಅರ್.ಸಿ.ಹೆಚ್.ಡಾ.ಶ್ರೀನಿವಾಸ. ಡಾ.ವಿನಯ್. ಎಂ.ವಿಜಯನಗರ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು. ಜಿಲ್ಲಾ ಗುಣಮಟ್ಟ ಖಾತರಿ ಅಧಿಕಾರಿಗಳು  ಡಾ. ಗುರುಪ್ರಸಾದ.    ಜಿಲ್ಲಾ ಆಡಳಿತ ಮತ್ತು ಕಾರ್ಯಕ್ರಮ ಸಲಹೆಗಾರರು. ಕಿರಣ್ ,ಡಾ. ಶಂಕರ್ ನಾಯ್ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅದಿಕಾರಿಗಳು ವಿಜಯನಗರ,   ಪ್ರಾಥಮಿಕ ಆರೋಗ್ಯ ಕೇಂದ್ರ ಕೋಗಳಿಯ ವೈದ್ಯಾಧಿಕಾರಿಗಳಾದ  ಡಾ.ಎಂ.ಗಂಗಾ  ಡಾ.ಎಂ.ಧರ್ಮನಗೌಡ. ಹಿರಿಯ  ಅರೋಗ್ಯ ನಿರೀಕ್ಷಣಾಧಿಕಾರಿಗಳು. ಡಾ.ಶ್ರೀನಿವಾಸ ರೆಡ್ಡಿ   ಹಿರಿಯ  ಅರೋಗ್ಯ ನಿರೀಕ್ಷಣಾಧಿಕಾರಿಗಳು ,  ಬಿ  ವಿಶ್ವಪತಿ. ಅರೋಗ್ಯ ನಿರೀಕ್ಷಣಾಧಿಕಾರಿಗಳು ,    ಸಮುದಾಯ ಆರೋಗ್ಯ ಅಧಿಕಾರಿಗಳಾದ ಆರ್. ರಘುಪತಿ  ಮಂಜುನಾಥ .ಕೆ ಆರ್  , ಐಶ್ವರ್ಯ ,ಬಿ ವಿಜಯ  ಮಹಾಂತೇಶಗೌಡ.  ಹೆಚ್ ಐ ಓ  ಹಾಗೂ  ಆಶಾಕಾರ್ಯಕರ್ತೆ ಪಾಲ್ಗೊಂಡಿದ್ದರು..