ಕೋಗಳಿ  ತಾಂಡದಲ್ಲಿ 77ನೇ ಸ್ವಾತಂತ್ರ್ಯೋತ್ಸವದ   ಆಚರಣೆ

ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ. ಆ.16  ತಾಲೂಕು ಶ್ರೀರಾಮನಗರ ಗ್ರಾಮ ಘಟಕದ ವತಿಯಿಂದ ಹಾಗೂ ತಾಲೂಕು ಘಟಕದ ಸಹಾಯದೊಂದಿಗೆ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.ಸಂಘಟನೆಯ ತಾಲೂಕು ಕಾರ್ಯಾಧ್ಯಕ್ಷರಾದ ಶ್ರೀ ದೇವರಮನಿ ನೀಲಪ್ಪ ನವರು ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಗಳ ಫಲವಾಗಿ ಇಂದು ದೇಶಾದ್ಯಂತ ತುಂಬಾ ಅದ್ದೂರಿಯಾಗಿ77ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ದೇಶಾದ್ಯಂತ ಕ್ರಾಂತಿಕಾರಿಗಳ ಹೋರಾಟಗಳನ್ನ ನೋಡಿದ ಬ್ರಿಟಿಷರು ಹೆದರಿ ದೇಶವನ್ನು ಬಿಟ್ಟು ತೊಲಗಬೇಕಾದ ಪರಿಸ್ಥಿತಿ ಬಂದಿತ್ತು, ಮುಂದಿನ ಪೀಳಿಗೆಯ ನಮ್ಮ ಜನರು ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ವೀರಯೋಧರ,ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುತ್ತಾ ಇರಬೇಕು ಎಂದರು.ನಂತರ ಮಾತನಾಡಿದ ಗ್ರಾಮ ಘಟಕದ ಅಧ್ಯಕ್ಷ, ಪ್ರಕಾಶ ಆರ್ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ ಬಂದದ್ದು ಇಂದಿಗೆ 77 ವರ್ಷಗಳು ಕಳೆಯಿತು, ನಮಗೆ ಸ್ವತಂತ್ರ ಬರಲು ಕಾರಣರಾದ ಮಹಾತ್ಮರು  ಮಹಾ ನಾಯಕರು ನಮಗೆ ಸ್ವತಂತ್ರ ತರಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ, ಅಂತ ನಾಯಕರ ಆದರ್ಶಗಳನ್ನ ನೆನಪಿನಲ್ಲಿ ಇಟ್ಟುಕೊಂಡು ನಾವು ಜೀವನವನ್ನು ನಡೆಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಕ.ಬ.ರ.ವೇ. ರಾಜ್ಯ ಕಾರ್ಯದರ್ಶಿ ರವಿನಾಯ್ಕ ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ಡಿ ನಿಂಗಪ್ಪ, ಸಂಘಟನಾ ಕಾರ್ಯದರ್ಶಿ, ಅರುಣ್ ಕುಮಾರ್, ಉಪಾಧ್ಯಕ್ಷರು ರಾಮ ನಾಯ್ಕ್ , ಮಲ್ಲೇಶ್ ನಾಯ್ಕ್, ಲೋಕನಾಯ್ಕ , ರಾಮ ನಾಯ್ಕ್ ಇನ್ನು ಮುಂತಾದವರು ಇದ್ದರು.