ಕೊಹ್ಲಿ ಹುಟ್ಟುಹಬ್ಬದ ಪೋಟೊ ವೈರಲ್

ದುಬೈ, ನ ೬- ೩೨ನೇ ವರ್ಷಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ದುಬೈನಲ್ಲಿ ಬಹಳ ಸಂಭ್ರಮ ಸಡಗರದಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿ ಅನುಷ್ಕಾ ಶರ್ಮ, ಆರ್‌ಸಿಬಿ ಆಟಗಾರರೆಲ್ಲ ಈ ಸಂಭ್ರಮಕ್ಕೆ ಸಾಕ್ಷಿಯಾದರು.
ಕೊಹ್ಲಿ ಬರ್ತ್‌ಡೇ ಆಚರಣೆಯ ಎರಡು ಕಿರು ವೀಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಒಂದರಲ್ಲಿ, ಆಟಗಾರರೆಲ್ಲ “ಹ್ಯಾಪ್ಪಿ ಬರ್ತ್‌ಡೇ’ ಎನ್ನುತ್ತ ಚಪ್ಪಾಳೆ ತಟ್ಟುತ್ತಿರುವ, ಕೊಹ್ಲಿ ಕೇಕ್ ಕತ್ತರಿಸುವ ದೃಶ್ಯವಿದೆ. ಪಕ್ಕದಲ್ಲೇ ನಿಂತಿದ್ದ ಅನುಷ್ಕಾ ಮೊದಲ ಕೇಕ್ ಪೀಸ್ ಅನ್ನು ವಿರಾಟ್‌ಗೆ ತಿನಿಸಿ, ಸಿಹಿಮುತ್ತನ್ನು ನೀಡುತ್ತಿದ್ದಾರೆ.
ಜನ್ಮದಿನದ ಸಂಭ್ರಮ ಆಚರಣೆಯ ಖಾಸಗಿ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಕೇಕ್ ಕತ್ತರಿಸಿದರು. ಬಳಿಕ ಆರ್‌ಸಿಬಿ ತಂಡದ ಆಟಗಾರರೆಲ್ಲರೂ ಅವರ ಮುಖ, ತಲೆಯ ತುಂಬೆಲ್ಲೆ ಕೇಕ್ ಮೆತ್ತಿಸಿ ಸಂಭ್ರಮಿಸಿದರು. ಬಳಿಕ ಆರ್‌ಸಿಬಿ ತಂಡದ ಆಟಗಾರರೆಲ್ಲರೂ ನರ್ತಿಸಿದರು.
ವಿರಾಟ್ ಕೊಹ್ಲಿ ಜನ್ಮದಿನದ ಸಂಭ್ರಮಾಚರಣೆಯ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ವಿರಾಟ್ ಕೊಹ್ಲಿ ಅವರ ಹಾಲಿ-ಮಾಜಿ ಸಹ ಮತ್ತು ಎದುರಾಳಿ ಆಟಗಾರರು ಮತ್ತು ಅಭಿಮಾನಿಗಳು ,ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಜನ್ಮದಿನದ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.