ಕೊಹ್ಲಿ ಶೀಘ್ರ ಫಾರ್ಮ್ ಗೆ ಮರಳುತ್ತಾರೆ: ಕಪಿಲ್ ದೇವ್ ವಿಶ್ವಾಸ

ನವದೆಹಲಿ, ಜು.16-ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರು ಶ್ರೇಷ್ಠ ಆಟಗಾರ ಅವರು ಶೀಘ್ರ ಫಾರ್ಮ್ ಗೆ ಮರಳಲಿ ಎಂಬುದು ತಮ್ಮ ಬಯಕೆಯಾಗಿದೆ 1983 ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ತಿಳಿಸಿದ್ದಾರೆ.
ಫಾರ್ಮ್ ಗೆ ತಿಣುಕಾಡುತ್ತಿರುವ ಬೆನ್ನಲ್ಲೇ, ಕೊಹ್ಲಿ ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ವಿರಾಟ್ ಕೊಹ್ಲಿ‌ ಬ್ಯಾಟಿಂಗ್ ಬಗ್ಗೆ ಮೌನಮುರಿದಿದ್ದಾರೆ, ಕೊಹ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಆಡಬಲ್ಲರು ಎಂದು ತಿಳಿಸಿದರು.
ಕಳೆದ ಐದಾರು ವರ್ಷಗಳಲ್ಲಿ ವಿರಾಟ್ ಇಲ್ಲದೆ ಭಾರತ ಆಡಿಯೇ ಇಲ್ಲ ಅಂತೇನಿಲ್ಲ. ಆದರೆ ಅಂಥ ಆಟಗಾರನೊಬ್ಬ ಉತ್ತಮ ಫಾರ್ಮ್​​ನೊಂದಿಗೆ ಮರಳಬೇಕೆಂಬುದು ನನ್ನ ಇಚ್ಛೆ. ಅವರನ್ನು ಹೊರಗಿಡಲಾಗಿದೆ ಅಥವಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆದರೂ ಅವರಲ್ಲಿ ಇನ್ನೂ ಬಹಳಷ್ಟು ಕ್ರಿಕೆಟ್ ಬಾಕಿ ಇದೆ. ಅವರೇ ಹೊರಬರುವ ದಾರಿಯನ್ನೂ ಹುಡುಕಿಕೊಳ್ಳಬೇಕಿದೆ ಎಂದು ಹೇಳಿದರು.
ವೆಸ್ಟ್ಇಂಡೀಸ್ ಸರಣಿಯಿಂದ ಕೊಹ್ಲಿ ಅವರನ್ನು ಕೈಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಕಪಿಲ್ ದೇವ್,
ವಿರಾಟ್ ಕೊಹ್ಲಿಯಂತಹ ದೊಡ್ಡ ಆಟಗಾರನನ್ನು ಕೈಬಿಡಬೇಕು ಎಂದು ನಾನು ಹೇಳಲಾರೆ, ಅವರು ತುಂಬಾ ದೊಡ್ಡ ಆಟಗಾರ, ನೀವು ಅವರಿಗೆ ಗೌರವ ನೀಡಲು ವಿಶ್ರಾಂತಿ ನೀಡಲಾಗಿದೆ ಎಂಬುದಾಗಿ
ಹೇಳಿದ್ದರೆ ಅದೇನೂ ತಪ್ಪಲ್ಲ ಎಂದು ಕಪಿಲ್ ದೇವ್ ತಿಳಿಸಿದ್ದಾರೆ.