ಕೊಹ್ಲಿ, ಮ್ಯಾಕ್ಸ್ ವೆಲ್, ಪಡಿಕ್ಕಲ್ ರನ್ನು ಆರ್ ಸಿಬಿಯಲ್ಲೇ ಉಳಿಸಿಕೊಳ್ಳಲು ಲಾರಾ ಸಲಹೆ

ಶಾರ್ಜಾ, ಅ.12-ಮುಂದಿನ ಐಪಿಎಲ್ ಸೀಸಸನ್ ಗೆ ಇದೇ ಡಿಸೆಂಬರ್ ತಿಂಗಳಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ವೇಳೆ ಆರ್​ಸಿಬಿ ಉಳಿಸಿಕೊಳ್ಳಬಹುದಾದ ಮೂವರು ಬ್ಯಾಟರ್ಸ್ ಯಾರೆಂದು ಬ್ರಿಯಾನ್ ಲಾರಾ ಅಂದಾಜಿಸಿದ್ದಾರೆ.
ಬೆಂಗಳೂರು ತಂಡ ಕೆಲ ಬ್ಯಾಟುಗಾರರನ್ನ ಉಳಿಕೊಳ್ಳುವುದೇ ಆದಲ್ಲಿ ಈ ಮೂವರನ್ನ ಪರಿಗಣಿಸಿ ಎಂದಿದ್ದಾರೆ. ಆರ್​ಸಿಬಿ ಉಳಿಸಿಕೊಳ್ಳಬಹುದಾದ ಆ ಮೂವರು ಬ್ಯಾಟರ್ಸ್ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ದೇವದತ್ ಪಡಿಕ್ಕಲ್.
ಆರ್​ಸಿಬಿ ಮ್ಯಾನೇಜ್ಮೆಂಟ್​ನವರು ಕೆಲ ಕಠಿಣ ನಿರ್ಧಾರಗಳನ್ನ ಕೈಗೊಳ್ಳಬೇಕು. ಮ್ಯಾಕ್ಸ್​​ವೆಲ್ ಅವರು ತಂಡಕ್ಕೆ ಆಗಮಿಸಿ ಕೋಚ್ ಮಾತುಗಳಿಗೆ ಕಿವಿಗೊಡುತ್ತಿದ್ದಾರೆ. ಅವರಿಂದ ಇದ್ದ ನಿರೀಕ್ಷೆಯನ್ನ ಅವರು ಪೂರ್ಣಗೊಳಿಸಿದ್ಧಾರೆ ಎಂದು ಆಸ್ಟ್ರೇಲಿಯಾ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಬಗ್ಗೆ ಬ್ರಿಯಾನ್ ಲಾರಾ ಹೇಳಿದ್ದಾರೆ.
ಕಳೆದ ಬಾರಿಯ ಐಪಿಎಲ್ ಹರಾಜಿನಲ್ಲಿ ಮ್ಯಾಕ್ಸ್​​ವೆಲ್ ಅವರನ್ನ ಆರ್​ಸಿಬಿ ಬರೋಬ್ಬರಿ 14.25 ಕೋಟಿ ರೂ ಕೊಟ್ಟು ಖರೀದಿ ಮಾಡಿತ್ತು. ಆದರೆ, ಆ ಬೆಲೆಗೆ ತಕ್ಕಂಥ ಆಟವನ್ನ ಮ್ಯಾಕ್ಸ್​ವೆಲ್ ಆಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರನ್ನೂ ಆರ್​ಸಿಬಿ ಉಳಿಸಿಕೊಳ್ಳಬೇಕು ಎನ್ನುವ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಎಬಿ ಡೀವಿಲಿಯರ್ಸ್ ಅವರನ್ನ ಕೈಬಿಡುವುದು ಒಳ್ಳೆಯದು ಎಂದಿದ್ಧಾರೆ.