ಕೊಹ್ಲಿ ಜತೆ ಟಾಸ್ ಗ್ ಹೆಜ್ಜೆ; ಕೇನ್ ಸಂತಸ

Kane WIlliamson, ODI kit, Black Caps 2018/19 Season Photoshoot. Grand Mercure Hotel, Auckland. 4 October 2018. Copyright Image: William Booth / www.photosport.nz

ಲಂಡನ್​, ಜೂ. 7-ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತಮ ಸ್ನೇಹಿತರಾಗಿದ್ದು, ಅವರ ಜೊತೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಟಾಸ್​ ವೇಳೆ ಹೆಜ್ಜೆಹಾಕುವುದು ತುಂಬಾ ಸಂತಸದಿಂದ ಕೂಡಿರಲಿದೆ ಎಂದು ನ್ಯೂಜಿಲೆಂಡ್ ​ ತಂಡದ ​ ನಾಯಕ ಕೇನ್ ವಿಲಿಯಮ್ಸನ್​ ಹೇಳಿದ್ದಾರೆ.
ಜೂನ್ 18ರಿಂದ 22ರವರೆಗೆ ಸೌತಾಂಪ್ಟನ್​ನಲ್ಲಿ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯಲಿದೆ. ಕೊಹ್ಲಿ ಮತ್ತು ವಿಲಿಯಮ್ಸನ್​ ತಮ್ಮ ನಾಯಕತ್ವದಲ್ಲಿ ಈ ಐತಿಹಾಸಿಕ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ. ಭಾರತ ತಂಡದ ವಿಶ್ವದರ್ಜೆಯ ಬೌಲಿಂಗ್ ದಾಳಿ ಎದುರಿಸುವುದು ಸುಲಭವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವು ಹಲವಾರು ವಿಭಿನ್ನ ಹಂತಗಳಲ್ಲಿ ಮತ್ತು ಸ್ಪರ್ಧೆಗಳಲ್ಲಿ ಪರಸ್ಪರರ ವಿರುದ್ಧ ಆಡಿದ್ದೇವೆ. ನಾವು ಒಬ್ಬರನ್ನೊಬ್ಬರನ್ನು ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದೇವೆ. ಹಾಗಾಗಿ ಮೊದಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದ ವೇಳೆ ಟಾಸ್​ಗಾಗಿ ಜೊತೆಯಾಗಿ ಹೆಜ್ಜೆಯಾಕುವುದಕ್ಕೆ ತುಂಬಾ ಹರ್ಷವಿದೆ ಎಂದು ಐಸಿಸಿ ವೆಬ್​ಸೈಟ್​ ಜೊತೆ ಮಾತನಾಡುವಾಗ ಈ ಅಭಿಪ್ರಾಯ ವ್ಯಕ್ತಿಯ ಪಡಿಸಿದ್ದಾರೆ.