
ಕೊಲ್ಕತ್ತ,ನ.5- ವಿರಾಟ್ ಕೊಹ್ಲಿ ಶತಕದ ಅಬ್ಬರ, ಹಾಗೂ ರವೀಂದ್ರ ಜಡೇಜಾ ಸ್ಪಿನ್ ಮೋಡಿಗೆ ಬೆಚ್ಚಿಬಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 243 ರನ್ ಗಳ ಬೃಹತ್ ಮೊತ್ತ ಗೆಲುವು ಸಾಧಿಸಿತು.
ಈ ಭರ್ಜರಿ ಜಯದೊಂದಿಗೆ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಜಯದ ನಾಗಲೋಟವನ್ನು ಮುಂದುವರಸಿದೆ.
ಈ ಬಾರಿಯ ವಿಶ್ವಕಪ್ ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಹರಿಣಗಳು ಇಂದಿನ ಪಂದ್ಯದಲ್ಲಿ ಭಾರತದ ಎದುರು ಹೀನಾಯ ಸೋಲುವ ಮೂಲಕ ಮಂಡಿಯೂರಿತು.
ಅಲ್ಲದೆ ಹರಿಣಗಳ ರನ್ ವೇಗಕ್ಕೂ ರೋಹಿತ್ ಪಡೆ ಮೂಗುದಾರ ಹಾಕಿತು.
ಗೆಲುವಿಗೆ ಅಗತ್ಯವಿದ್ದ 327 ರನ್ ಗಳ ಬೃಹತ್ ಮೊತ್ತದ ಬೆನ್ನುಹತ್ತಿದ್ದ ದಕ್ಷಿಣ ಆಫ್ರಿಕಾ 27.1ಓವರ್ ಗಳಲ್ಲಿ 83 ರನ್ ಗಳಿಗೆ ಸರ್ವಪತನ ಕಂಡಿತು.
ರವೀಂದ್ರ ಜಡೇಜಾ ಸ್ಪಿನ್ ಮೋಡಿಗೆ ಲಗುಬಗೆಯಿಂದ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು. ಕ್ಲಿಂಟನ್ ಡೀ ಕಾಕ್, ನಾಯಕ ಬೆವುಮಾ ಸೇರಿದಂತೆ ಇತರ ಬ್ಯಾಟರ್ ಗಳು ಭಾರತದ ಬೌಲಿಂಗ್ ಗೆ ತಬ್ಬಿಬ್ಬುಗೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲಗೊಂಡು 243 ರನ್ ಗಳಿಂದ ಸೋಲು ಕಂಡಿತು.
ಜಡೇಜಾ 33 ರನ್ ನೀಡಿ 5 ವಿಕೆಟ್ ಕಿತ್ತರು.ಶಮಿ ಹಾಗೂ ಕುಲ್ದೀಪ್ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ 50ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಭಾರತದ ಪರ ವಿರಾಟ್ ಕೊಹ್ಲಿ 101 ರನ್ ಗಳಿಸಿ ಅಜೇಯ ಶತಕ ದಾಖಲಿಸಿದರೆ, ಶ್ರೇಯಸ್ ಅಯ್ಯರ್ 77 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು.
ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಕೂಡ 40 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಕೊನೆಯಲ್ಲಿ ಕೊಹ್ಲಿಗೆ ಸಾಥ್ ನೀಡಿದ ಜಡೇಜಾ 29 ರನ್‌ಗಳ ಬಾರಿಸಿದರು.ಕೆ.ಎಲ್. ರಾಹುಲ್ ಬ್ಯಾಟಿಂಗ್ ನಲ್ಲಿ ಮತ್ತೆ ಎಡವಿದರೆ, /ಶುಭಮನ್ ಗಿಲ್ 23 ರನ್ ಗಳಿಸಿದರು.
49 ನೇ ಶತಕ
ಕಿಂಗ್ ಕೊಹ್ಲಿಗೆ ಇಂದು 35ನೇ ಹುಟ್ಟುಹಬ್ಬದ ಸಂಭ್ರಮ. ಈ ಶುಭ ದಿನದಂದು ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ 49 ನೇ ಶತಕ ಸಿಡಿಸಿದರು.
ಮೂರು ಪಂದ್ಯಗಳಲ್ಲಿ ಶತಕದ ಅಂಚಿಗೆ ಬಂದು ವಿಕೆಟ್ ಒಪ್ಪಿಸಿ ಅಭಿಮಾನಿಗಳಿಗೆ ಕೊಹ್ಲಿ ನಿರಾಸೆ ಮೂಡಿಸಿದ್ದರು.
ಆದರೆ ಇಂದು 49ನೇ ಶತಕ ಸಿಡಿಸಿದರು. ಅಲ್ಲದೆ 101 ರನ್ ಗಳಿಸಿದರು. ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು.
ವಿರಾಟ್ ಕೊಹ್ಲಿ ಸಾಧನೆಗೆ ಬಗ್ಗೆ ಎಕ್ಸ್ ನಲ್ಲಿ ಶುಭಾಶಯ ಕೋರಿದ್ದಾರೆ.
ಏಕದಿನ ಪಂದ್ಯದಲ್ಲಿ ಹೆಚ್ಚು ಶತಕಗಳಿಸಿದವರು
ವಿರಾಟ್ ಕೊಹ್ಲಿ 277 ಇನ್ನಿಂಗ್ಸ್ 49 ಶತಕ
ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್ 49 ಶತಕ
ರೋಹಿತ್ ಶರ್ಮಾ 251 ಇನ್ನಿಂಗ್ಸ್ 31 ಶತಕ
ರಿಕಿ ಪಾಂಟಿಂಗ್ 365 ಇನ್ನಿಂಗ್ಸ್ 30 ಶತಕ
ಸನತ್ ಜಯಸೂರ್ಯ 433 ಇನ್ನಿಂಗ್ಸ್ 28 ಶತಕ