ಕೊಹ್ಲಿ ಗೈರು ಅಸೀಸ್‌ಗೆ ಭಾರತ ಸುಲಭ ತುತ್ತು

ಮುಂಬೈ,ನ.೧೨- ವಿರಾಟ್‌ಕೊಹ್ಲಿ ಇಲ್ಲದ ಕ್ರಿಕೆಟ್ ಟೆಸ್ಟ್ ಟೂರ್ನಿಯಲ್ಲಿ ಅಸ್ಟ್ರೇಲಿಯಾ ಸುಲಭ ಜಯ ಪಡೆಯಲಿದೆ ಎಂದು ಮೈಕಲ್ ವಾನ್ ಭವಿಷ್ಯ ನುಡಿದಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಮೂರು ತಿಂಗಳ ಕಾಲ ಟೀಂ ಇಂಡಿಯಾ ಏಕದಿನ, ಟಿ-೨೦ ಹಾಗೂ ಟೆಸ್ಟ್ ಟೂರ್ನಿಗಳನ್ನು ಆಡಲಿದ್ದು, ಇದರಲ್ಲಿ ಒಂದು ಹಗಲು ಮತ್ತು ರಾತ್ರಿ ಪಂದ್ಯವು ಸೇರಿದೆ. ಆದರೆ, ಟೆಸ್ಟ್ ಟೂರ್ನಿಯ ಅಂತಿಮ ಮೂರು ಪಂದ್ಯಗಳಿಂದ ವಿರಾಟ್ ಕೊಹ್ಲಿ ದೂರವಾಗಿದ್ದು, ಕೌಟುಂಬಿಕ ಕಾರಣದಿಂದ ಭಾರತಕ್ಕೆ ವಾಪಸ್ಸಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ಅವರು ಕೊಹ್ಲಿ ಇಲ್ಲದ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ ಟೆಸ್ಟ್ ಟೂರ್ನಿಯಲ್ಲಿ ಸುಲಭ ಜಯ ಪಡೆಯಲಿದೆ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಇಲ್ಲದ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಗೆಲ್ಲುವುದು ಕಷ್ಟ. ನನ್ನ ಪ್ರಕಾರ ಆಸಿಸ್ ಟೆಸ್ಟ್ ಟೂರ್ನಿಯಲ್ಲಿ ಸುಲಭ ಜಯ ಪಡೆಯಲಿದೆ ಎಂದು ವಾನ್ ಟ್ವಿಟ್ ಮಾಡಿದ್ದಾರೆ. ಬಿಸಿಸಿಐ ಪ್ರಸ್ತುತ ರೋಹಿತ್ ಶರ್ಮಾ ಅವರಿಗೆ ಸೀಮಿತ ಓವರ್‌ಗಳ ಕ್ರಿಕೆಟ್ ಟೂರ್ನಿಯಿಂದ ಸಂಪೂರ್ಣವಾಗಿ ವಿಶ್ರಾಂತಿ ನೀಡಿದ್ದು, ಟೆಸ್ಟ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದ ಬಳಿಕ ಕೊಹ್ಲಿ ಅವರ ಅನುಪ ಸ್ಥಿತಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಇತ್ತ ಐಪಿಎನ್ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಶುಭ ಕೋರಿದ್ದ ಮೈಕಲ್‌ವಾನ್ ಅವರು ರೋಹಿತ್ ಶರ್ಮಾ ಅವರನ್ನು ಹೊಗಳಿದ್ದಲ್ಲದೆ ಟೀಂ ಇಂಡಿಯಾ ಟಿ-೨೦ ನಾಯಕನನ್ನಾಗಿ ರೋಹಿತ್‌ಶರ್ಮಾರನು ಆಯ್ಕೆ ಮಾಡಬೇಕೆಂದು ಆಭಿಪ್ರಾಯ ಪಟ್ಟಿದ್ದರು.ಐಪಿಎಲ್ -೨೦೨೦ ಟೂರ್ನಿ ಮುಕ್ತಾಯದೊಂದಿಗೆ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಪ್ರವಾಸ ಕೈಗೊಂಡಿದ್ದಾರೆ.
ಕೊರೊನಾ ಬಳಿಕ ಟೀಂ ಇಂಡಿಯಾ,ಆಸಿಸ್ ವಿರುದ್ಧ ತನ್ನ ಮೊದಲ ಅಂತರರಾಷ್ಟ್ರೀಯ ಟೂರ್ನಿಯನ್ನು ಆಡುತ್ತಿದೆ.