ಕೊಹ್ಲಿ, ಎಬಿಡಿ ಟ್ವೀಟ್‌ಗೆ ಅಭಿಮಾನಿಗಳ ಸಂತಸ


ಬೆಂಗಳೂರು,ಮಾ.೩೦- ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ಮುಗಿಯುತ್ತಿದ್ದಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್‌ಕೊಹ್ಲಿ ಐಪಿಎಲ್‌ನತ್ತ ಮುಖ ಮಾಡಿದ್ದಾರೆ. ಈ ಮಹತ್ವದ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಕೊಹ್ಲಿ ಬಿರುಸಿನ ತಯಾರಿಯಲ್ಲಿ ತೊಡಗಿದ್ದಾರೆ.
ತಮಗೆ ವಿಶ್ರಾಂತಿಯ ದಿನಗಳೇ ಇಲ್ಲ. ಈಗ ಐಪಿಎಲ್ ಕಡೆಗೆ ಓಡಬೇಕು ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಜಿಮ್‌ನಲ್ಲಿ ಓಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿ ಈ ರೀತಿ ಬರೆದುಕೊಂಡಿದ್ದಾರೆ. ಇದಕ್ಕೆ ಕಮೆಂಟ್ ಹಾಕಿರುವ ಎಬಿಡಿ ವಿಲಿಯರ್‍ಸ್ ನಾನು ಕೂಡ ನಿಮ್ಮ ಜತೆ ತಂಡ ಸೇರಿಕೊಳ್ಳಲು ಪ್ಯಾಕ್ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ಎರಡೂ ಟ್ವೀಟ್‌ಗಳನ್ನು ವೀಕ್ಷಿಸಿರುವ ಆರ್‌ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.