ಕೊವಿಡ ಜಾಗೃತಿ ಮೂಡಿಸಿದ ಪಿಎಸ್ಐ ದಿವ್ಯ ಮಹಾದೇವ

ಕಾಳಗಿ. ಏ.22 : ಕೊವಿಡ-19 ಕೊರೋನಾ ವೈರಸ್ 2ನೇ ಅಲೆ ತುಂಬಾ ಭಯಾನಕವಾಗಿ ತೀರ್ವಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಜನತೆಯ ಪ್ರಾಣ ಪಕ್ಷಿ ಹಾರಿಗೊಗುತ್ತಿವೆ.
ಕಾರಣ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪರಿಪಾಲನೆ ಮಾಡುವುದು ತುಂಬಾ ಮುಖ್ಯವಾಗಿದೆ ಎಂದು ತಾಲೂಕು ದಂಡಾಧಿಕಾರಿ ಅರುಣಕುಮಾರ ಕುಲ್ಕರ್ಣಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳ ವಿಶೇಷ ಸಭೆ ನಡೆಸಿದ ದಂಡಾಧಿಕಾರಿಗಳು, ಕೊವಿಡ್ ಜಾಗೃತಿಗಾಗಿ ಕೈಗೊಳ್ಳುವ ಎಲ್ಲಾ ಕ್ರಮಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದರು.

ನೈಟ್ ಕರ್ಫ್ಯೂ ನೀಟಾಗಿ ಪಾಲಿಸಿ:
ರಾಜ್ಯಾದ್ಯಂತ ಜಾರಿಗೋಳಿಸಿರುವ ನೈಟ್ ಕರ್ಫ್ಯೂ ಕೊಟ್ಟು ನಿಟ್ಟಾಗಿ ಪರಿಪಾಲನೆ ಮಾಡುವಂತೆ ಸಾರ್ವಜನಿಕರಿಗೆ ಪಿಎಸ್ಐ ದಿವ್ಯಾಮಹಾದೇವ ಕಡಕ್ ಎಚ್ಚರಿಕೆ ನೀಡಿದರು.
ಮುಖ್ಯ ಬಜಾರ್ ನಲ್ಲಿ ಕೆಲಸಮಾಡುವ ಉದ್ಯಮಿಗಳು ಕಡ್ಡಾಯವಾಗಿ ಕೊವಿಡ್ ಟೇಸ್ಟ್ ಮಾಡಿಸಿಕೊಂಡು ತಮ್ಮ ವ್ಯಾಪಾರದಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದ ಅವರು, ಮಾಸ್ಕ್, ಸಾಮಾಜಿಕ ಅಂತರ, ಹ್ಯಾಂಡ್ ಸ್ಯಾನಿಟೈಜರ ಕಡ್ಡಾಯವಾಗಿ ಬಳಸುವಂತೆ ತಾಕಿತು ಮಾಡಿದರು.
ವೀಕ್ಯಾಂಡ್ ಲಾಕ್ ಡೌನ್:
ವಾರಾಂತ್ಯದಲ್ಲಿ ಒಂದು ದಿನ ಸೂಕ್ಷ್ಮವಾಗಿ ಲಾಕ್ ಡೌನ್ ಜಾರಿಯಾಗಿದ್ದು, ಜನಸಾಮಾನ್ಯರು ಅರ್ಥ ಮಾಡಿಕೊಂಡು ಅನಾವಶ್ಯಕ ವಾಗಿ ಹೊರಗಡೆ ಓಡಾಡುವಂತಿಲ್ಲ.
ಸಾಮೂಹಿಕ ಪ್ರಾರ್ಥನೆ, ನಮಾಜ್, ಜಾತ್ರೆ, ಉರುಸ್, ರಥೋತ್ಸವ ಗಳಂತಹ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವುದು ಸೇರಿ ವಿವಾಹ ಸಮಯದಲ್ಲಿ 50ಜನ ಮಾತ್ರ ಭಾಗವಹಿಸುವುದು.
ಶವಸಂಸ್ಕಾರದಲ್ಲಿ 20ಜನ ಸೇರಿ ಅಂತ್ಯಕ್ರಿಯೆ ನಡೆಸುವಂತಹ ಅನೇಕ ವಿಷಯಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದರು.
ಕಾಳಗಿ ಸೋಮವಾರ ಸಂತೆ ಸ್ಥಳಾಂತರ:
ಪಟ್ಟಣದಲ್ಲಿ ಪ್ರತಿ ಸೋಮವಾರ ಮುಖ್ಯ ಬಜಾರ್ ನಲ್ಲಿ ನಡೆಯುವ ಸಾರ್ವಜನಿಕ ಸಂತೆ ಸ್ಥಳಾಂತರಗೊಳಿಸಿ ಬಯಲು ಮೈದಾನದಲ್ಲಿ ಸಾಮಾಜಿಕ ಅಂತರದೊಂದಿಗೆ ಸ್ಥಳಗುರುತಿಸಿಕೊಡುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ತೆಲಂಗ ಅವರಿಗೆ ತಹಸೀಲ್ದಾರ್ ನಿರ್ದೇಶನ ಮಾಡಿದರು.
ಸಭೆಯಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅನೀಲಕುಮಾರ ರಾಠೋಡ, ಗ್ರೇಡ್-2 ತಹಸೀಲ್ದಾರ ನಾಗನಾಥ ತರಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ತೆಲಂಗ, ಪಿಎಸ್ಐ ದಿವ್ಯಮಹಾದೇವ, PRE AEE ವಿರೇಂದ್ರ, ಸಮೂದಾಯ ಆರೋಗ್ಯಕೇಂದ್ರ ಆಡಳಿತಾಧೀಕಾರಿ ಅಮರೇಶ ಎಂ.ಎಚ್, ಮಾಣಿಕ ಘತ್ತರಗಿ, ಆರ್ ಐ.ಕರಬಸಪ್ಪ ಬೆನಕನಳ್ಳಿ, ಕಿರಿಯ ಆರೋಗ್ಯ ಸಾಹಾಯಕಿ ಅನುರಾಧ ಗುತ್ತೇದಾರ ಸೇರಿದಂತೆ ಅನೇಕರಿದ್ದರು.