ಕೊವಿಡ್ ಹಿನ್ನೆಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಮುದ್ದೇಬಿಹಾಳ: ಮೇ.19:ಶಾಸಕರ ನಿಧಿಯಿಂದ ಸುಮಾರು 50 ಲಕ್ಷ ಅನುದಾನದಲ್ಲಿ ಸೊಂಕಿತರಿಗೆ ಯೋಗ್ಯ ವೈದ್ಯಕೀ ಚಿಕಿತ್ಸೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರಿದಿಸುವ ಮೂಲಕ ಮತಕ್ಷೇತ್ರದಲ್ಲಿ ಕೋರೊನಾ ಸೊಂಕಿತರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕತ್ಸೆ ದೊರಕುವಂತೆ ಮಾಡುವುದು ಹಾಗೂ ತಾಲೂಕಿನ ಬಹುತೇಕ ಎಲ್ಲ ವಸತಿ ಶಾಲೆಗಳಲ್ಲಿ ಸುಮಾರು 1 ಸಾವಿರ ಬೆಡ್ ಗಳ ಕೋವಿಡ್ ಕ್ವಾರಂಟೈನ ವ್ಯವಸ್ಥೆ ಕಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಹೇಳಿದರು.

ಪಟ್ಟಣದ ಇಲ್ಲಿನ ತಮ್ಮ ದಾಸೋಹ ನಿಲದಲ್ಲಿ ಮಂಗಳವಾರ ತಾಲೂಕಾ ವಿವಿಧ ಅಧಿಕಾರಿಗಳ ಪ್ರಗತಿ ಪರಿಶಿಲನಾ ಸಭೆ ನಡೆಸಿ ಅವರು ಮಾತನಾಡಿದರು.

ಈಗಾಗಲೇ ಮತಕ್ಷೇತ್ರದಲ್ಲಿ ಕೋರೊನಾ ಸೊಂಕಿತರಿಗೆ ಅವರ ಚಿÀಕಿತ್ಸೆ ನೀಡಲಾಗುತ್ತಿದೆÉ ಆದರೂ ಮುಂಬರುವ ದಿನಗಳಲ್ಲಿ ಯಾವೂದೇ ಸಾವು ನೋವುಗಳ ಬಾರದಂತೆ ಮುಂಜಾಗೃತವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮತಕ್ಷೇತ್ರದ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಸೊಂಕಿತರು ಅಲ್ಲಿಗೇ ಹೋಗಿ ಚಿಕಿತ್ಸೆ ಪಡೆದುಕೊಳ್ಳಲು ಆಕ್ಸಿಜನ್ ಸೌಲಭ್ಯ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕಾಗಿರುವುದ ಅಗತ್ಯವಾಗಿ ಕಾರಣ ಸಂಬಂಧಪಟ್ಟ ಅಧಿಕಾರಿಗಳು ವ್ಯರ್ಥ ಸಮಯ ಹಾಳು ಮಾಡದೇ ತಮ್ಮ ಜವಾಬ್ದಾರಿಯನ್ನು ತಾವು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ನಿಟ್ಟಿನಲ್ಲಿ ಸುಮಾರು 50 ಲಕ್ಷ ಶಾಸಕರ ನಿಧಿಯಲ್ಲಿ 3 ಎಲ್ಲ ಸೌಲಭ್ಯಗಳುಳ್ಳ ಆಂಬ್ಯುಲೇನ್ಸ್, 500 ಆಕ್ಸಿ ಮೀಟರ್, 150 ಆಕ್ಸಿಜನ್ ಸಿಲೇಂಡರ್ ಸೇರಿದಂತೆ ಇನ್ನು ಆಸ್ಪತ್ರೆಗೆ ಬೇಕಾಗುವ ಔಷಧಗಳನ್ನು ಮತ್ತು ಅಗತ್ಯ ವೈದೈಕಿಯ ಪರಿಕರಗಳನ್ನು ಖರಿದಿಸಲಾಗುವುದು. 15 ಕೆ ಎಸ್ ಆರ್ ಟಿಸಿ ಬಸ್ ಗಳಲ್ಲಿ 100ರಿಇಂದ 120 ಜನ ಸೊಂಕಿತರಿಗೆ ಚಿಕಿತ್ಸೆ ನೀಡಲು ಏನೇಲ್ಲ ಸೌಲಭ್ಯಗಳನ್ನು ಕಲ್ಪಸÀಬೇಕು ಅದನ್ನು ಸಿದ್ದತೆ ಮಾಡಿಕೊಳ್ಳಿ ಆಯಾ ಬಸ್ ಗಳನ್ನು ಆಕ್ಸಿಜನ್ ಅಳವಡಿಸಿ ಒಂದು ಬಸ್ ನಲ್ಲಿ ಸುಮಾರು 8 ರಿಂದ 10 ಜನ ಸೊಂಕಿತರಿಗೆ ಚಿಕಿತ್ಸೆ ನೀಡುವಂತೆ ಮಾಡಬೇಕು ಜತೆಗೆ ಆಯಾ ಗ್ರಾಮಗಳಿಗೆ ಬಸ್ ತೆರಳಿ ಗ್ರಾಮದಲ್ಲಿ ಕೋವಿಡ್ ಸೊಂಕಿತರು ತುರ್ತು ಚಿಕಿತ್ಸೆ ನೀಡುವ ಹಾಗೇ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ ಗಳಿಗೆ ಸೂಚಿಸಿದರು.

ಅದರಂತೆ ತಾಲೂಕಿನಲ್ಲಿರುವ ಎಲ್ಲ ಆಶಾ ಕಾರ್ಯಕರ್ತರನ್ನು ಆಯಾ ಕೋವಿಡ್ ಕ್ವಾರಂಟೈನಲ್ಲಿ ಸರಕಾರದ ಮಾರ್ಗಸೂಚಿ ಅನ್ವಯ ಅವರಿಗೆ ವಿಶೇಷ ತರಬೇತಿ ನೀಡಿ ಪ್ರತಿ 20 ಜನರಿಗೆ ಒಬ್ಬರಂತೆ ಆಶಾ ಕಾರ್ಯಕರ್ತೇಯರನ್ನು ಹಾಗೂ 20ರಿಂದ 40 ಜನರಿಗೆ ಒಬ್ಬರು ವೈದೈಕಿಯ ನರ್ಸಗಳನ್ನು ನೇಮಕ ಮಾಡಬೇಕು.

ಜೊತೆಗೆ ಕ್ವಾರಂಟೈನ ಸೆಂಟರ್ ಆಯ್ಕೆ ಮಾಡಿದ ಆಯಾ ವಸತಿ ಶಾಲೆಗಳಲ್ಲಿ ಸೊಂಕಿತರಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು ಗುಣಮಟ್ಟ ಆಹಾರ ವ್ಯವಸ್ಥೆ ಸೇರಿದಂತೆ ಇತರೆ ಮೂಲಬೂತ ಸೌಲಭ್ಯಗಳನ್ನು ಕಲಿಸಬೇಕು. ಈ ವೇಳೆ ಚಿಕ್ಕ ಮಕ್ಕಳಿಗೆ, ಗರ್ಭೀಣಿಯರಿಗೆ ನವಜಾತ ಶಿಶುಗಳಿಗೆ ಪ್ರತ್ಯೇಕ ಕೋಠಡಿಯ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ ಎಂದರು.

ಈ ವೇಳೆ ತಹಶಿಲ್ದಾರ ಪ್ರಭುಲಿಂಗ ವಾಲಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿರೇಶ ಹಿರೇಮಠ, ಸಿಪಿಐ ಆನಂದ ವಾಗಮೋರೆ, ಪಿಎಸೈ ಎಂ ಬಿ ಬಿರಾದಾರ, ಪುರಸಭೆ ಮುಖ್ಯಾಧಿಕಾರಿಗಳಾದ ಗೋಪಾಲ ಕಾಸೆ, ಸುರೇಖಾ ಬಾಗಲಕೋಟ, ಆರ್ ಓ ಎನ್ ಎಸ್ ಪಾಟೀಲ ಸೇರಿದಂತೆ ಹಲವರು ಇದ್ದರು.