ಕೊವಿಡ್ ಸೆಂಟರ್ ಪ್ರಾರಂಭಕ್ಕೆ ಶಾಸಕರ ಸೂಚನೆ

ಜಗಳೂರು.ಏ.೨೪; ಶಾಸಕ ಎಸ್.ವಿ  ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ಕೋವಿಡ್ 19 ವೈರಸ್ ಬಗ್ಗೆ ತುರ್ತು ಅಧಿಕಾರಿಗಳಿಗೆ ಸಭೆ ನಡೆಸಿದರು.ಸಭೆಯಲ್ಲಿ  ಕೋವಿಡ್ ಸೆಂಟರನ್ನು ನಿರ್ಮಿಸಲು ತಾಲೂಕು ದಂಡಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಕೋವಿಡ್ ಕೇರ್ ಸೆಂಟರ್ ಮೆದಗಿನಕೆರೆ ಹತ್ತಿರವಿರುವ ಮೊರಾರ್ಜಿ ಶಾಲೆ ಶಾಲೆಯಲ್ಲಿ ಪ್ರಾರಂಭಿಸಲು  ಖಡಕ್ ಸೂಚನೆ ನೀಡಿದ್ದರು ಶಾಸಕರ ಆದೇಶದಂತೆ ಇಂದು ತಾಲೂಕು ದಂಡಾಧಿಕಾರಿ ಡಾ. ನಾಗವೇಣಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ ಅವರು ಮೆದಗಿನಕೆರೆ ಗ್ರಾಮದ ಹತ್ತಿರವಿರುವ ಮುರಾರ್ಜಿ ವಸತಿ ಶಾಲೆಯನ್ನು ಕೋವಿಡ್ ಸೆಂಟರ್ ನಿರ್ಮಿಸಲು  ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ತಾಲೂಕು ಆರೋಗ್ಯಧಿಕಾರಿ ಡಾ. ನಾಗರಾಜ್ ಅವರಿಗೆ  ಪ್ರಾರಂಭಿಸಲು ತಿಳಿಸಿದರು.ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳಾದ ಕುಬೇರ ನಾಯ್ಕ್. ವಿಜಯಕುಮಾರ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು