ಕೊವಿಡ್ ಸೆಂಟರ್ ಗೆ ನೊಡೆಲ್ ಅಧಿಕಾರಿ ಭೇಟಿ

ಜಗಳೂರು.ಮೇ.೨೬; ತಾಲೂಕಿನ ಮೆದಗಿನಕೆರೆ ಹತ್ತಿರವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕೋವಿಡ್  ಕೇರ್   ಸೆಂಟರ್ ನಲ್ಲಿರುವ   ಸೋಂಕಿತರಿಗೆ ಇಂದು ಬೆಳಿಗ್ಗೆ ಸಹಾಯಕ ನೋಡಲ್ ಅಧಿಕಾರಿ   ಡಿ.ಮಹೇಶ್ವರಪ್ಪ  ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಮಾಸ್ಕ್.ಸ್ಯಾನಿಟೈಸರ್ ಮತ್ತು ದಿನಪತ್ರಿಕೆಗಳನ್ನು ವಿತರಣೆ ಮಾಡಿದರು ನಂತರ ಮಾತನಾಡಿದ ಅವರು   ಸೋಂಕಿತರು ಯಾವುದೇ ಚಿಂತೆ ಮಾಡದೆ  ಆರೋಗ್ಯವಾಗಿರಬೇಕು  ಸರಿಯಾದ ಸಮಯಕ್ಕೆ 
ವೈದ್ಯರು ಕೊಡುವ  ಔಷಧಿಯನ್ನು ತೆಗೆದುಕೊಂಡು ಯಾರು ಭಯಪಡಬಾರದು ಎಲ್ಲರೂ ಮಸ್ತ್ ಮತ್ತು ಸ್ಯಾನಿಟೈಸರ್ ಬಳಸಿ ಎಲ್ಲರಿಗೂ ಬೆಳಿಗ್ಗೆ ಶುದ್ಧ ಕುಡಿಯುವ ಬಿಸಿನೀರು ತಿಂಡಿ ಊಟ ಮಧ್ಯಾಹ್ನ -ರಾತ್ರಿ ಊಟ ಮತ್ತು ಒಳ್ಳೆಯ ಗುಣಮಟ್ಟದ ಆಹಾರವನ್ನು ಕೊಡಲಾಗುತ್ತದೆ  ಎಲ್ಲರೂ  ಕೋವಿಡ್ ಸೆಂಟರನ ಒಳಗಡೆ ಸ್ವಚ್ಛತೆ ಕಾಪಾಡಬೇಕು ನಿಮಗೆ ಏನಾದರೂ ತೊಂದರೆ ಆದರೆ ನನಗೆ ಕರೆ ಮಾಡಿ ನಿಮ್ಮ ಸೇವೆ ಮಾಡಲು ದಿನದ 24 ಗಂಟೆಯಲ್ಲಿ ಸಿದ್ದ ಇರುತ್ತೇನೆ ಯಾರು ಭಯಪಡಬಾರದು ಎಲ್ಲರೂ ಧೈರ್ಯದಿಂದ ಗುಣಮುಖರಾಗಿ ಸೆಂಟರ್ ನಿಂದ ಹೊರಗೆ ಮನೆ ಬೇಕು ಎಂದರು