ಕೊವಿಡ್ ಸೆಂಟರ್ ಗೆ ಎಸಿ ಭೇಟಿ

ಜಗಳೂರು.ಮೇ.೧: ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮೆದಗಿನಕೆರೆ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಕೊರೊನಾ ಸೋಂಕಿತರ ಯೋಗಕ್ಷೇಮ ವಿಚಾರಿಸಿ ಅವರಿಗೆ ಮೂಲಭೂತ ಸೌಲಭ್ಯಗಳು ಸರಿಯಾಗಿ ನೀಡಲಾಗುತ್ತಿರುವ ಬಗ್ಗೆ  ಪರಿಶೀಲಿಸಿದರು 
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾನಾಗವೇಣಿ . ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ವರಪ್ಪ . ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯ್ಕ್. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜಪ್ಪ ದಿದ್ದಿಗಿ. ಶಾಲೆಯ ಪ್ರಾಂಶುಪಾಲರಾದ ರೂಪಕಲಾ ಹಾಗೂ ವಾರ್ಡನ್ ಮತ್ತು ಕೋವಿಡ್ ಕೇರ್ ಸಿಬ್ಬಂದಿಗಳು ಹಾಜರಿದ್ದರು.