ಕೊವಿಡ್ ವ್ಯಕ್ತಿಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ವಾಹನದ ವ್ಯವಸ್ಥೆ.

ಹೊನ್ನಾಳಿ.ಮೇ. 4;  ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಿಂದ ಕೊವಿಡ್ ಹಿನ್ನೆಲೆಯಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿಗಳಿಗೆ ಕೊವಿಡ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು, ಗುಣಮುಖರಾದವರು ತೆರಳಲು ಉಚಿತವಾಗಿ ವಾಹನ ಒದಗಿಸಲು ಧರ್ಮಸ್ಥಳದ ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರು ಆದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆದೇಶಿಸಿದ್ದು ಅದರಂತೆ ಹೊನ್ನಾಳಿ ನ್ಯಾಮತಿ ತಾಲೂಕಿನಲ್ಲಿ ಇಂತಹ ವಾಹನದ ಸೇವೆಯ ಅಗತ್ಯತೆ ಬಿದ್ದಲ್ಲಿ ತಾಲೂಕೂ ಯೋಜನಾಧಿಕಾರಿ ಬಸವರಾಜ ರವರನ್ನು ಸಂಪರ್ಕಿಸಿರಿ. ಮೋ. 7090129365 ಈ ವಾಹನದ ಸೇವೆ ಲಭ್ಯ ಎಂದು   ಯೋಜನಾಧಿಕಾರಿ ಬಸವರಾಜ ಅಂಗಡಿ ತಿಳಿಸಿದರು.  ಈ ಸಂದರ್ಭದಲ್ಲಿ ಯೋಜನೆಯ ಮೇಲ್ವಿಚಾರಕರಾದ ನಾಗರಾಜ್ ಮತ್ತು ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.