ಕೊವಿಡ್ ವಾರ್ಡ್ ಗಳಿಗೆ ಶಾಸಕ ಎಂಪಿಆರ್ ಭೇಟಿ

ಹೊನ್ನಾಳಿ.ಮೇ.೨೮; ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್ ಗಳಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ  ಭೇಟಿನೀಡಿ ಕೋವಿಡ್ ಸೊಂಕಿತರ ಆರೋಗ್ಯ ವಿಚಾರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳಿದರು.ಈ ವೇಳೆ ಕೋವಿಡ್ ಸೊಂಕಿತ ಬಂಧುಗಳಿಗೆ ಹಾಗೂ ಚಿಕಿತ್ಸೆ ಪಡೆಯಲು ಆಗಮಿಸಿದ್ದ ಬಂಧುಗಳಿಗೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಉಪಹಾರ ನೀಡಿ, ಕೋವಿಡ್ ಪರೀಕ್ಷೆಗೆ ಆಗಮಿಸಿದ್ದ  ಆರೋಗ್ಯ ವಿಚಾರಿಸಿದರು.