ಕೊವಿಡ್ ಲಸಿಕೆ ಪಡೆದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ, ಎ.20:ನಗರದ ದರ್ಗಾ ಜೈಲ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಸದ ರಮೇಶ ಜಿಗಜಿಣಗಿ ಇವರು ಸೋಮವಾರ ದಿನಾಂಕ: 19.04.2021ರಂದು ಲಸಿಕೆಯನ್ನು ಪಡೆದರು.
ಲಸಿಕೆ ಪಡೆದು ಮಾತನಾಡಿದ ಅವರು ಕರೋನಾ ಪಾಸಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಭಯಬೀತರಾಗದೇ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ಹಾಗೇಯೆ 45 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ನಾಗರಿಕರು ಲಸಿಕೆಯನ್ನು ಪಡೆದುಕೊಂಡು ದೇಶವನ್ನು ಕರೋನಾ ಮುಕ್ತವಾಗಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದಂರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ: ರಾಜಕುಮಾರ ಯರಗಲ್, ಡಾ.ಕೆ.ಡಿ. ಗುಂಡಬಾವಡಿ, ಎಸ್.ಎನ್. ಪ್ರದ್ಞಾ, ಶ್ರೀಮತಿ ಎನ್.ಬಿ. ಚೌಧರಿ ಹಾಗೂ ವಿಜಯ ಜೋಶಿ ಹಾಗೂ ಹಲವಾರು ಜನ ಉಪಸ್ಥಿತರಿದ್ದರು.