ಕೊವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲ:ನಾಡಗೌಡ

ಮುದ್ದೇಬಿಹಾಳ;ಜೂ.8: ಕೋವಿಡ್ ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣ ಎಡವಿದೆ ವಿಫಲವಾಗಿದೆ ಜನರ ರಕ್ಷಣೆ ಹೊಣೆಯನ್ನೇ ಮರೆತಿದ್ದಾರೆ ಎಂದು ಮಾಜಿ ಸಚೀವ ಸಿ ಎಸ್ ನಾಡಗೌಡ (ಅಪ್ಪಾಜಿ) ಹೇಳಿದರು.

ಅವರು ಸೋಮುವಾರ ಪಟ್ಟಣದ ಮಹಿಬೂಬ ನಗರದಲ್ಲಿ ಪುರಸಭೆ ಸದಸ್ಯ ರಿಯಾಜ್‍ಹಮ್ಮದ ಢವಳಗಿ ಅವರ ನಿವಾಸದಲ್ಲಿ ಎಸ್ ಎಂ.ಡಿ ಗ್ರೋಪ್ ವತಿಯಿಂದ ಬಡವರಿಗೆ, ಅಸಹಾಯಕರಿಗೆ, ದಿನಗೂಲಿ ಕಾರ್ಮಿಕರಿಗೆ ದಿನಸಿ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.

ಪ್ರಸ್ತುತ ರಾಜ್ಯ ಸರಕಾರ ಕೋಣದ ಚರ್ಮದಂತಾಗಿದೆ, ವಿರೋಧ ಪಕ್ಷದವರಾಗಲಿ ಅಥವಾ ಸಾರ್ವಜನಿಕರಾಗಲಿ ಸರಕಾರದ ಧೋರಣೆಯನ್ನು ಖಂಡಿಸಿದರೇ ಯಾವೂದಕ್ಕೂ ಕ್ಯಾರೆ ಎನ್ನದೇ ತಮ್ಮ ಕಾಯಕದಲ್ಲಿಯೇ ಮುಂದುವರೆದಿದೆ.

ನಮ್ಮ ಕಾಂಗ್ರೇಸ್ ಮುಖಂಡರೊಬ್ಬರು ಇದೋಂದು ನರೇಂದ್ರ ಮೋಯವರ ಲಸಿಕೆ ಎಂದು ವ್ಯಂಗ್ಯ ಮಾಡಿ ಹೇಳಿಕೆ ನಿಡಿದ್ದಾರೆ ವಿನಃ ಕಾಂಗ್ರೇಸ್ ಪಕ್ಷ ಯಾವತ್ತಿಗೂ ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಹೇಳಿಲ್ಲ.ಯಾಕೇ ಕಳೇದ ಒಂಬತ್ತು ತಿಂಗಳಿಂದ ವಿದೇಶದಿಂದ ಲಸಿಕೆ ತರಿಸಲಿಲ್ಲ ಇಲ್ಲಿ ತನಕವೂ ಲಸಿಕೆ ತರಿಸಲು ಸಾಧ್ಯವಾಗಿಲ್ಲ. ಹಾಗಾಗಿ ದೇಶದಲ್ಲೇಡೆ ಕೋರೊನಾ ಮಹಾ ಅಲೇ ಅಬ್ಬರಗೊಂಡಿದೆ ಇದರಿಂದಾಗಿ ಸಾಕಷ್ಟು ಸಾವು ನೋವುಗಳನ್ನು ಕಾಣಬಹುದಾಯಿತು.

ಕೇಂದ್ರ ಸರಕಾರ ಕೋವಿಡ್ ನಿಯಂತ್ರಿಸುವಲ್ಲಿ ಮೋದಲೇ ಮುಂಜಾಗೃತ ಕ್ರಮವನ್ನು ವಹಿಸಿ ಆಕ್ಸಿಜನ್ ಆಯಾ ತಾಲೂಕಾ ಆಸ್ಪತ್ರೆಗಳಿಗೆ ವಿತರಿಸಿದ್ದರೇ ಆಕ್ಸಿಜನ್ ತೊಂದರೆಯಾಗುತ್ತಿರಲಿಲ್ಲ. ಕೋವಿಡ್ ಎರಡನೆ ಅಲೇ ಪ್ರಾರಂಭಗೊಂಡಿದೆ ಎಂದು ಮಾಧ್ಯಮದವರು ಹೇಳುತ್ತಿದ್ದರೂ ಉಪಚುನಾವಣೆ, ಪಂಚಾಯಿತಿ ಚುನಾವಣೆಗಳನ್ನು ನಡೆಸಲಾಯಿತು. ರಾಜ್ಯ ಸರಕಾರಕ್ಕೆ ಈ ಚುನಾವಣೆ ಮಾಡುವ ಅಗತ್ಯವೇನಿತ್ತು.

ಈ ಚುನಾವಣೆಗಾಗಿ ಗೋವಾ ಮಹಾರಾಷ್ಟಗಳಿಂದ ಜನರು ಕರ್ನಾಟಕಕ್ಕೆ ಬಂದು ಇಲ್ಲಿ ಕೋರೊನಾ ಸೊಂಕು ಹರಡುವಂತಾಗಿದೆ ಇದೇಲ್ಲಕ್ಕೂ ಸರಕಾರ ದ ದಿವ್ಯ ನಿರ್ಲಕ್ಷವೇ ಕಾರಣ ಇದನ್ನು ಹೇಳಿದರೇ ಹಿಂದು ಮುಸ್ಲಿಂ ಎಂದು ಜಾತಿ ಎತ್ತಿ ಕಟ್ಟಿ ರಾಜ್ಯದ ಜನರ ನೆಮ್ಮಿ ಹಾಳು ಮಾಡುವ ಮೂಲಕ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿರುವುದು ಯಾರು ಎಂಬುದು ಜನರಿಗೆ ಈ ಗ ಅರ್ಥವಾಗಿದೆ.

ಲಾಕ್ ಡೌನಿಂದಾಗಿ ತರಕಾರಿ ಮಾರುವವರು, ದಿನಗಳು ಮಾಡುವ ಕಾರ್ಮಿಕರು ಇಂದು ನಿರ್ಗತಿಕರಾಗಿ ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿ ಅವರ ಕುಟುಂಭ ಸಧ್ಯ ಬೀದಿಗೆ ಬಿದ್ದಿವೆ ಇಂತಹ ಸಂದರ್ಭದಲ್ಲಿ ದಿನನಿತ್ಯ ಬಳಕೆಯಾಗುವ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಇದೇನಾ ಕೇಂದ್ರ ಹಾಗೂ ಬಿಜೆಪಿ ಸರಕಾರ ಆಡಳಿತ ಎಂದು ಪ್ರಶ್ನಿಸಿದರು.

ಕೊವಿಡ್ ನಿಯಂತ್ರಣ ಮಾಡುವಲ್ಲಿ ಸರಕಾರ ವಿಫಲವಾಗಿದೆ ಅಂತ ಚರ್ಚೆ ಟೀಕೆ ಟಿಪ್ಪಣಿ ಮಾಡುತ್ತೇವೆ ಇದರ ಜೊತೆ ಗೆ ನಾಗರಿಕರು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಶಿಸ್ತು ಪಾಲನೆ ಇಲ್ಲ,ಸಾಮಾಜಿಕ ಅಂತರವಿಲ್ಲ,ಮದುವೆ ಮಾಡುವುದು ಬಿಟ್ಟಿಲ್ಲ ಮರಣವಾದ್ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ, ಲಾಕ್ಡೌನ್ ಇದ್ದರು ಅನಗತ್ಯವಾಗಿ ತಿರುಗಾಡುವುದು ಮಾಡ್ತರೆ ,ನಾಗರಿಕರು ತಮ್ಮ ಜವಾಬ್ದಾರಿ ಬದ್ದತೆ ಅರಿತರೇ ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳನ್ನು ಗೆಲ್ಲಬಹುದು ಎಂದರು.

ಪುರಸಭೆ ಸದಸ್ಯ ರಿಯಾಜಮ್ಮದ ಢವಳಗಿ, ಮಾಜಿ ಪುರಸಭೆ ಸದಸ್ಯ ಪಿಂಟು ಸಾಲಿಮನಿ,ಕಾಂಗ್ರೆಸ್ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ವಾಯ್ ಹೆಚ್ ವಿಜಯಕರ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಸದಸ್ಯರಾದ ಪ್ರೀತಿ ದೇಗಿನಾಳ,ಭಾರತಿ ಪಾಟೀಲ್, ಕಾಂಗ್ರೆಸ್ ಮುಖಂಡ ಗುರು ತಾರನಾಳ,ಮಹ್ಮದರಫೀಕ ಶಿರೋಳ ,ಅಶೋಕ ನಾಡಗೌಡ, ಸಾಹೇಬಲಾಲ ದೇಸಾಯಿ, ಅನ್ವರಸಾಬ ಢವಳಗಿ ಅಜೀಜ್ ನಾಯ್ಕೋಡಿ, ಯೂಸುಫ್ ನಾಯ್ಕೋಡಿ, ಪ್ರಶಾಂತ ತಾರನಾಳ ದಿಕ್ಷೀತ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು,ಚಂದ್ರು ಕಲಾಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು