ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ


ಬಾದಾಮಿ,ಎ.29:ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಕಾರಣ ಬೇರೆ ಜಿಲ್ಲೆ, ರಾಜ್ಯ ಹಾಗೂ ಅಂತರ ಸ್ಥಳಗಳಿಂದ ಬರುವಂತಹ ಜನಸಾಮಾನ್ಯರು ತಾಲೂಕಾ ಆಸ್ಪತ್ರೆಗಳಲ್ಲಿ ಕೊವಿಡ್ ಟೆಸ್ಟ ಮಾಡಿಸಿಕೊಂಡು ತಮ್ಮ ತಮ್ಮ ಊರುಗಳಿಗೆ ತೆರಳಬೇಕು ಇದನ್ನು ಆಯಾ ಗ್ರಾಮದ ಅಂಗನವಾಡಿ, ಆಶಾ, ಗ್ರಾಮಲೆಕ್ಕಾಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಾಜಿ ಸದಸ್ಯ ಮಹಾಂತೇಶ ಹಟ್ಟಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಬೇರೆ ಊರಿನಿಂದ ಬಂದವರಿಗೆ ಒಂದು ವಾರದವರೆಗೆ ಪ್ರತ್ಯೇಕವಾದ ವಾಸಕ್ಕೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಮುಖ್ಯವಾಗಿ ನಿಮ್ಮ- ನಿಮ್ಮ ಊರಿನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಫೋನ್ ಮೂಲಕ ವಿಷಯವನ್ನು ತಿಳಿಸಿದರೆ. ಅವರೂ ಸಹ ನಿಮಗೆ ಸಹಾಯ ಮತ್ತು ಸರಿಯಾದ ಮಾಹಿತಿಯನ್ನು ನೀಡುತ್ತಾರೆ. ಕುಳಗೇರಿ ಭಾಗದ ಅಂಗನವಾಡಿ, ಆಶಾ, ಆಯಾ ಕಾರ್ಯಕರ್ತೆಯರಿಗೆ ದಿಂ.ಲಕ್ಷ್ಮಣ ಯಲ್ಲಪ್ಪ ಹಟ್ಟಿ ಶಿಕ್ಷಣ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಮಾಸ್ಕ ಮತ್ತು ಸ್ಯಾನಿಟೈಜರ್ ಕಲ್ಪಿಸುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದೆಂದು ಅವರು ತಿಳಿಸಿದ್ದಾರೆ.