ಕೊವಿಡ್ ಕೇರ್ ಸೆಂಟರ್ ಸ್ವಚ್ಛವಾಗಿಡಲು ಸಲಹೆ

ಹೊನ್ನಾಳಿ.ಜೂ.೭ : ಕೋವಿಡ್ ಕೇರ್ ಸೆಂಟರ್‌ಗಳನ್ನು ಸೋಂಕಿತರು ತಮ್ಮ ಮನೆ ಎಂದು ತಿಳಿದು ಕೊಂಡು ಸ್ವಚ್ಚವಾಗಿಟ್ಟುಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೋಂಕಿತರಿಗೆ ಕಿವಿ ಮಾತು ಹೇಳಿದರು. ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮೂರನೇ ದಿನದ ವಾಸ್ತವ್ಯ ಮಾಡಿ, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ಮಾತನಾಡಿದರು. ಕೋವಿಡ್ ಕೇರ್ ಸೆಂಟರ್‌ನಲ್ಲಿ ನಾನು ವಾಸ್ತವ್ಯ ಮಾಡುತ್ತಿರುವುದು ಸೋಂಕಿತರಿಗೆ ಆತ್ಮಸ್ಥೆöÊರ್ಯ ತುಂಬ ಬೇಕೆಂಬ ಉದ್ದೇಶದಿಂದ ಎಂದ ಶಾಸಕರು ಸೋಂಕಿತರು ತಮ್ಮ ಕೊಠಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಕಿವಿ ಮಾತು ಹೇಳಿದರು.ನನಗೆ ಎರಡು ಬಾರೀ ಪಾಸಿಟಿವ್ ಬಂದಾಗ ನಾನೇ ನನ್ನ ಕೊಠಡಿಯನ್ನ ಸ್ವಚ್ಚ ಮಾಡಿಕೊಳ್ಳುತ್ತಿದ್ದೇ, ಅದೇ ರೀತಿ ನೀವು ಕೂಡ ನಿಮ್ಮ ಕೊಠಡಿಗಳನ್ನು ಸ್ವಚ್ಚ ಮಾಡಿಕೊಳ್ಳುವ ಮೂಲಕ ಕೋವಿಡ್ ಕೇರ್ ಸೆಂಟರ್ ಅನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಕಿವಿ ಮಾತು ಹೇಳಿದರು.ಸೋಂಕಿತರಿಗಾಗೀ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ : ಕೋವಿಡ್ ಕೇರ್ ಸೆಂಟರ್‌ನಲ್ಲಿ ಮೂರು ದಿನಗಳಿಂದ ವಾಸ್ತವ್ಯ ಮಾಡಿರುವ ರೇಣುಕಾಚಾರ್ಯ ಪ್ರತಿದಿನ ಸಂಜೆ ಸೋಂಕಿತರಿಗಾಗೀ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮಾಡಿಸುತ್ತಿದ್ದಾರೆ. ಬೆಂಗಳೂರಿನ ನಟರಾಜ್ ಗ್ರೂಪ್‌ನವರು ಮೂರು ದಿನಗಳಿಂದ ವಿವಿಧ ಚಿತ್ರಗೀತೆಗಳನ್ನು ಹಾಡುವ ಮೂಲಕ ಸೋಂಕಿತರಿಗೆ ಮನೋರಂಜೆ ನೀಡುತ್ತಿದ್ದಾರೆ ಅಲ್ಲದೇ ಸೋಂಕಿತರೂ ಕೂಡ ತಮ್ಮ ನೋವನ್ನು ಮರೆತು ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಡು ಹೇಳಿ ಕುಣಿದು ಕುಪ್ಪಳಿಸುತ್ತಿದ್ದಾರೆ.ಈ ಸಂದರ್ಭ ಸುಮಾ ರೇಣುಕಾಚಾರ್ಯ, ಸಹೋದರ ಎಂ.ಪಿ.ರಮೇಶ್, ಮುಖಂಡರಾದ ಮಹೇಶ್ ಉಡೇದ್,ರಂಗನಾಥ್ ಸೇರಿದಂತೆ ಮತ್ತೀತತರಿದ್ದರು.