ಕೊವಿಡ್ ಕೇರ್ ಸೆಂಟರ್ ನಲ್ಲಿ ಉಪಹಾರ ವಿತರಣೆ

ಹೊನ್ನಾಳಿ.ಜೂ.೨ : ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು, ಆಗಂತ ಜನರು ಮೈಮರೆಯದೇ ಕೊರೊನಾದಿಂದ ಜಾಗೃತರಾಗಿರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರ ವಾರ್ಡಿಗೆ ಭೇಟಿ ನೀಡಿದ ಶಾಸಕರು ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯದಿಂದ ಇರುವಂತೆ ಕಿವಿ ಮಾತುಹೇಳಿ ಸುದ್ದಿಗಾರೊಂದಿಗೆ ಮಾತನಾಡಿದರು.ನಗರ ಪ್ರದೇಶವನ್ನು ಹೊರತು ಪಡಿಸಿದರೇ ಕೊರೊನಾ ಎರಡನೇ ಅಲೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿದ್ದು ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಂಡು, ಶಾರೀರಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾದಿಂದ ದೂರು ಉಳಿಯುವಂತೆ ಸೂಚಿಸಿದರು.ಕೊರೊನಾ ಬಂತೆಂದು ಯಾರೋಬ್ಬರೂ ಕೂಡ ಭಯ ಪಡ ಬೇಡಿ, ಇನ್ನು ಕೊರೊನಾ ಬಂದ ವ್ಯಕ್ತಿಯನ್ನು ಯಾರೂ ಕೂಡ ಅವಮಾನ ಮಾಡ ಬೇಡಿ, ಅವರಿಗೆ ಧೈರ್ಯ ಹೇಳುವ ಮೂಲಕ ಅವರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕೆಲಸವನ್ನು ಮಾಡ ಬೇಕಂದು ಕರೆ ನೀಡಿದರು.ಸೋಂಕಿತರಿಗೆ ಬೆಳಗಿನ ಉಪಹಾರ : ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರಿಗೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ, ಪೊಲೀಸರಿಗೆ,ಲಸಿಕೆ ಹಾಕಿಸಿಕೊಳ್ಳಲು ಬಂದ ಸಾರ್ವಜನಿಕರಿಗೆ, ಎಪಿಎಂಸಿ ಕಾರ್ಮಿಕರಿಗೆ ಪ್ರತಿನಿತ್ಯ ಬೆಳಗಿನ ಉಪಹಾರ ನೀಡುತ್ತಿದ್ದು ಇಂದೂ ಕೂಡ ಎಂದಿನಂತೆ ಉಪಹಾರ ನೀಡಿ, ಕೊರೊನಾ ಸೋಂಕಿತರ ವಾರ್ಡಿಗೆ ಭೇಟಿ ನೀಡಿ ಅವರಿಗೆ ದೈರ್ಯ ಹೇಳಿದ ಶಾಸಕರು ಆದಷ್ಟು ಬೇಗ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತೀರೆಂದು ಸೋಂಕಿತರಿಗೆ ಆತ್ಮಸ್ಥೆöÊರ್ಯ ತುಂಬಿದರು.ಈ ಸಂದರ್ಭ ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಪುರಸಭಾ ಸದಸ್ಯರ ರಂಗನಾಥ್, ಓಬಳದಾರ್ ಬಾಬಣ್ಣ, ಮುಖಡರಾದ ಮಹೇಶ್ ಹುಡೇಡ್,ನೆಲವೊನ್ನೆ ಮಂಜುನಾಥ್ ಸೇರಿದಂತೆ ಮತ್ತಿತತರಿದ್ದರು.