ಕೊವಿಡ್ ಕೇರ್ ಸೆಂಟರ್ ಗೆ ಶಾಸಕರ ಭೇಟಿ

ಹರಪನಹಳ್ಳಿ.ಜೂ.೭; ತಾಲ್ಲೂಕಿನ ಮಾಚಿಹಳ್ಳಿ ಹತ್ತಿರದ ಕೋವಿಡ್ ಕೇರ್ ಸೆಂಟರ್ ಆಗಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಶಾಸಕ ಕರುಣಾಕರರೆಡ್ಡಿ ಭೇಟಿ ನೀಡಿ ಕೋವಿಡ್ ಸೊಂಕಿತರಿಗೆ ಸಾಂತ್ವನ ಹೇಳಿ ಅವರಿಗೆ ಮಾಸ್ಕ್ ಊಟ ಮತ್ತು ಹಣ್ಣು ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಲ್ ನಂದೀಶ, ಡಾ ವೆಂಕಟೇಶ, ಡಿ ವೈ ಎಸ್ ಪಿ ಹಾಲುಮೂರ್ತಿರಾವ್, ವೃತ್ತ ನೀರಿಕ್ಷಕರಾದ ನಾಗರಾಜ ಎಮ್ ಕಮ್ಮಾರ, ಪಿ ಎಸ್ ಐ, ಸಿ ಪ್ರಕಾಶ,ಬಿ ಸಿ ಎಮ್ ವಿಸ್ತಾರಣಾಧಿಕಾರಿ ಕೊಳಚಿ ಭೀಮಪ್ಪ,
ಬಿ ಜೆ ಪಿ ಮುಖಂಡರಾದ ಅರ್ ಲೋಕೇಶ್, ರಾಘವೇಂದ್ರ ಶೆಟ್ಟಿ, ವಿ ಪಿ ನಾಗರಾಜ,ಈ ಅಂಜಿನಪ್ಪ ತೆಲಗಿ ಎಂ ಸಂತೋಷ, ಮತ್ತಿತರರು ಉಪಸ್ಥಿತರಿದ್ದರು,