ಕೊವಿಡ್ ಕೇರ್ ಸೆಂಟರ್ ಗೆ ನ್ಯಾಯಾಧೀಶರ ಭೇಟಿ

ಜಗಳೂರು.ಜೂ.೬; ತಾಲ್ಲೂಕಿನ ಮೆದಗಿನಕೆರೆ ಹತ್ತಿರವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ಗೆ ಜಗಳೂರು ತಾಲೂಕು ಜೆ.ಎಮ್.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಜಿ ತಿಮ್ಮಯ್ಯಅವರು ಇಂದು ಭೇಟಿ ಮಾಡಿ ಕೋರೋನ  ಸೋಂಕಿತರ ಯೋಗಕ್ಷೇಮ ವಿಚಾರಿಸಿದರು. ನಂತರ ಮಾತನಾಡಿದ ಅವರು  ಕೋವಿಡ್ ಕೇರ್ ಸೆಂಟರ್ ನಲ್ಲಿ   ಊಟ ತಿಂಡಿ ಶುದ್ಧ ಕುಡಿಯುವ ನೀರು ಎಲ್ಲ ಕೊಡಲಾಗುತ್ತಿದೆಯೇ ಎಂದು  ಎಂದು ಕೇಳಿದಾಗ ಸೋಂಕಿತರು  ಇಲ್ಲಿ ಎಲ್ಲಾ ಸೌಲಭ್ಯಗಳಿವೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ
ಬೆಳಿಗ್ಗೆ ಎದ್ದ ತಕ್ಷಣ ದಿನಪತ್ರಿಕೆಗಳು ಎರಡು ದಿನ ದಿನಕ್ಕೊಮ್ಮೆ ಮಾಸ್ಕ್ ಮತ್ತು ಸ್ಯಾನಿಟೈಜರ್ ಮತ್ತು  ಬೆಳಿಗ್ಗೆ ಬಿಸ್ಕೆಟ್ ಬ್ರೆಡ್ ಟೀ ಮತ್ತು ತಿಂಡಿ ಮಧ್ಯಾಹ್ನ – ರಾತ್ರಿ ಊಟ ಚೆನ್ನಾಗಿರುತ್ತೆ ಸಂಜೆ ಟೀ ಬಿಸ್ಕೆಟ್ ಮೊಟ್ಟೆ ಬಾಳೆಹಣ್ಣು ಶುದ್ಧ ತಾಜಾ ತರಕಾರಿ ಮತ್ತು ಬಿಸಿ ನೀರು ಕಷಾಯ ಸರಿಯಾದ ಸಮಯಕ್ಕೆ ಕೊಡುತ್ತಿದ್ದಾರೆ ಎಂದು  ತಿಳಿಸಿದರು ನಾವು ಹಿಂದಿನ ಕಾಲದಲ್ಲಿ ಹೊಲಗದ್ದೆಗಳಲ್ಲಿ ನಿಂತಿರುವ ನೀರುಗಳನ್ನು ಕುಡಿಯುತ್ತಿದ್ದೆವು ನಮಗೆ ಆರೋಗ್ಯದಲ್ಲಿ ಏನೂ ಆಗುತ್ತಿರಲಿಲ್ಲ ಈಗ ಬಂದಿರ ಕಾಲ ಬಾಳ ಸೂಕ್ಷ್ಮವಾಗಿದೆ ನಾವು ಎಲ್ಲರೂ ಈ ಕೊರೋನಾ ಎಂಬ  ವೈರಸ್ ವಿರುದ್ಧ ಯುದ್ಧ ಮಾಡುವ ಪರಿಸ್ಥಿತಿ ಎದುರಾಗಿದೆ ಹಾಗಾಗಿ ತಾಲೂಕಿನಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು ನಂತರ ಅಲ್ಲಿನ ಉಸ್ತುವಾರಿ ವಹಿಸಿಕೊಂಡಿರುವ ಸಹಾಯಕ ನೋಡಲ್ ಅಧಿಕಾರಿ ಬಿ ಮಹೇಶ್ವರಪ್ಪ ಅವರಿಗೆ ಇಲ್ಲಿನ ಪರಿಸರ ವಾತಾವರಣ ತುಂಬಾ ಚೆನ್ನಾಗಿದೆ ಬೆಳಿಗ್ಗೆ ಎದ್ದ ತಕ್ಷಣ ವಾಕ್ ಮತ್ತು ಯೋಗ ಧ್ಯಾನ ಕಡ್ಡಾಯವಾಗಿ ಸೋಂಕಿತರಿಗೆ ಮಾಡಿಸಬೇಕುಅವರಿಗೆ ಯಾವುದೇ ಸಮಸ್ಯೆ ಇಲ್ಲದೆ ನೋಡಿಕೊಳ್ಳಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕೋವಿಡ್  ಕೇರ್ ಸೆಂಟರ್ ಸಹಾಯಕ ನೋಡಲ್ ಅಧಿಕಾರಿ ಹಾಗೂ ಸಮಾಜ ಕಲ್ಯಾಣಧಿಕಾರಿ ಬಿ.ಮಹೇಶ್ವರಪ್ಪ.
ತಾಲೂಕು ಆರೋಗ್ಯಧಿಕಾರಿ ಡಾ. ನಾಗರಾಜ್ ಶಾಲೆಯ ಪ್ರಾಂಶುಪಾಲೆ ರೂಪಕಲಾ ಮತ್ತು ವೈದ್ಯರು. ನರ್ಸ್ ಗಳು ಅಡಿಗೆ ಸಿಬ್ಬಂದಿಗಳು. ಸೇರಿದಂತೆ ಭಾಗವಹಿಸಿದ್ದರು