ಕೊವಿಡ್ ಕೇರ್ ಸೆಂಟರ್‍ನಲ್ಲಿ ಆಯುಷ್ ಔಷಧಿ ವಿತರಣೆ

ಮುದ್ದೇಬಿಹಾಳ:ಜೂ.3: ಪಟ್ಟಣದ ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಗೆ ಜಿಲ್ಲಾ ಆಯುಷ್ ಘಟಕದಿಂದ ತಾಲೂಕಿನ ಕೋವಿಡ್ ಕೇರ್ ಸೆಂಟರ್ ಗಳಿಗೆ ಆಯುಷ್ ವೈದ್ಯಾಧಿಕಾರಿಗಳಾದ ಡಾ: ಎಂ ಪಿ ಬಶೆಟ್ಟಿ ಹಾಗೂ ಡಾ:ಎಸ್ ಕೆ ರಾಠೋಡ ಅವರು ಬೇಟಿ ನೀಡಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ ಆಯುಷ್ಯ ಔಷದಿಗಳನ್ನು ಪ್ರತಿಯೊಬ್ಬರಿಗೂ ನೀಡಿದರು.

ಬಳಿಕ ಎಲ್ಲ ರೋಗಿಗಳಿಗೆ ಅಲೋಪತಿ ಚಿಕಿತ್ಸೆ ಜೊತಗೆ ಆಯುರ್ವೇದಿಕ ಔಷದಿಗಳನ್ನು ತಗೆದುಕೊಳ್ಳುಲು ತಿಳಿಸಿ ಇದರಿಂದ ರೋಗ ನಿರೋದಕ ಶಕ್ತಿ ವೃದ್ಧಿ ಆಗುತ್ತದೆ ಮತ್ತು ಇದರಿಂದ ಯಾವದೇತರ ಅಡ್ಡ ಪರಿಣಾಮಗಳಿಲ್ಲವೆಂದು ತಿಳಿಸಿ ಹೇಳಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು ಪ್ರತಿ ದಿನ ತಪ್ಪದೆ ಔಷದಿ ತಗೆದುಕೊಳ್ಳಲು ತಿಳಿಸಿದರು

ಈ ಸಂದರ್ಭದಲ್ಲಿ ತಾಲೂಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ: ಅನಿಲಕುಮಾರ್ ಶೇಗುಣಶಿ ಶುಶ್ರೂಷಣಾಧಿಕಾರಿ ಸಂಜಯ್ ಬೋಸಲೆ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ ಔಷದ ಸಂಯೋಜಕ ಅಧಿಕಾರಿ ಎಸ್ ಎ ದೇವುರ ಏನ್ ಎಸ್ ಸಂಗಮ ಹಾಜರಿದ್ದರು