ಕೊವಾಕ್ಸಿನ್ ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿ ಸಾವು

ಭೋಪಾಲ್, ಜ 9-ಕೊವಾಕ್ಸಿನ್ ಲಸಿಕೆಯ‌ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಸಂಭವಿಸಿದೆ.
42 ವರ್ಷದಲ್ಲೇ ಸ್ವಯಂಸೇವಕ ಪ್ತಾಯೋಗಿಕ ಲಸಿಕೆ ಪಡೆದು ಹತ್ತು ದಿನಗಳ ಬಳಿಕ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.
ಆದರೆ ಮೃತ ವ್ಯಕ್ತಿ ವಿಷ ಸೇವನೆಯಿಂದ ಮೃತಪಟ್ಡಿದ್ದಾರೆಂದು ಸರ್ಕಾರಿ ಅಧಿಕಾರಿಯೊಬ್ಬರು ಸಂಶಯ ವ್ಯಕ್ತಪಡಿಸಿದ್ದಾರೆ.
ಸಾವನ್ನಪ್ಪಿದ ವ್ಯಕ್ತಿ ದೀಪಕ್ ಮುರಾವಿ ಕಳೆದ ತಿಂಗಳು ಡಿ.12ರಂದು ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ್ದರು ಎಂದು‌ ಪೀಪಲ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉಪಕುಲಪತಿ ಡಾ.ರಾಜೇಶ್ ಕಪೂರ್ ಮಾಹಿತಿ ನೀಡಿದ್ದಾರೆ. ಅವಕಾಶ
ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿದ ಮಧ್ಯಪ್ರದೇಶದ ವೈದ್ಯಕೀಯ ಕಾನೂನು ಸಂಸ್ಥೆಯ ನಿರ್ದೇಶಕ ಡಾ. ಅಶೋಕ್ ಶರ್ಮಾ ಮಾತನಾಡಿ, ವಿಷ ಸೇವಿಸಿ ಸಾವನ್ನಪ್ಪಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಯ ಒಳ ಅಂಗಾಂಗಳ ಪರೀಕ್ಷೆ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದೂ ಅವರು ಹೇಳಿದ್ದಾರೆ.